ಕರ್ನಾಟಕ

karnataka

ರೈತರ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ನೀಡ್ತಿದ್ದಾರೆ ಈ 'ಧರ್ಮರಾಜ'

By

Published : Apr 27, 2020, 4:08 PM IST

ಇದ್ದಾಗ ಹಂಚಿ ತಿನ್ನು ಎನ್ನುವಂತೆ ಉದ್ಯಮಿಯೊಬ್ಬರು ತಮ್ಮ ಗ್ರಾಮದ ಸುತ್ತಮುತ್ತಲಿನ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ಬಡವರಿಗೆ ಹಂಚುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಐದು ಸಾವಿರ ಕುಟುಂಬಗಳಿಗೆ ಉಚಿತವಾಗಿ ತರಕಾರಿ ಪೂರೈಸುವ ಗುರಿ ಹೊಂದಿದ್ದಾರೆ.

businessman-dharmaraj-giving-free-vegetable-to-poor-people
ಉದ್ಯಮಿ ಧರ್ಮರಾಜ ಕಲ್ಲಹಂಗರಗಾ

ಸೇಡಂ: ರೈತರು ಬೆಳೆದ ತರಕಾರಿಯನ್ನು ಖರೀದಿ ಮಾಡಿ ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಚಿಂಚೋಳಿ ವ್ಯಾಪ್ತಿಯ ರಟಕಲ್​ ಗ್ರಾಮದ ಉದ್ಯಮಿ ಧರ್ಮರಾಜ ಕಲ್ಲಹಂಗರಗಾ ಅವರು ಮಾನವೀಯತೆ ಮೆರೆದಿದ್ದಾರೆ.

ದುಡಿಯುವ ಕೈಗಳಿಗೆ ಕೆಲಸವಿಲ್ಲ.‌ ಕೆಲಸವಿಲ್ಲ ಎಂದರೆ ಹೊಟ್ಟೆಗೆ ಹಿಟ್ಟಿಲ್ಲ. ಸರ್ಕಾರ ಕೊಡುವ ದವಸ ಧಾನ್ಯ ಬೇಯಿಸಲು ಬೇಕಾದ ಸಾಮಗ್ರಿಗಳಿಲ್ಲ, ಇನ್ನು ತರಕಾರಿ ದೂರದ ಮಾತು. ಈ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಿರುವ ಉದ್ಯಮಿ ತಮ್ಮ ಗ್ರಾಮದ ಸುತ್ತಮುತ್ತಲು ರೈತರು ಬೆಳೆಯುವ ತರಕಾರಿಗಳನ್ನು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ರೈತರ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ನೀಡುವ 'ಧರ್ಮರಾಜ'

ಬೆಳೆದ ತರಕಾರಿ ಮಾರಲು ಆಗದೆ ಕೈಕಟ್ಟಿ ಕುಳಿತ ರೈತರಿಗೆ ನೆರವಾಗುವ ಮೂಲಕ, ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಈಗಾಗಲೇ ರೈತರಿಂದ ಈರುಳ್ಳಿ, ಅವರೇಕಾಯಿ, ಬೆಂಡೆಕಾಯಿ, ಸೌತೆಕಾಯಿ, ಕ್ಯಾರೆಟ್, ಬದನೆಕಾಯಿ, ಕೋತಂಬರಿ ಸೇರಿದಂತೆ ಅನೇಕ ಹಸಿ ತರಕಾರಿಗಳನ್ನು ಖರೀದಿಸಿರುವ ಅವರು, ಬಡ ಕುಟುಂಬಗಳನ್ನು ಗುರುತಿಸಿ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಲ್ಲದೆ ಐದು ಸಾವಿರ ಕುಟುಂಬಗಳಿಗೆ ತರಕಾರಿ ಪೂರೈಸುವ ಗುರಿ ಹೊಂದಿದ್ದು, ಇದಕ್ಕೆ ಎಂಟು ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗುತ್ತಿದೆ. ಆದರೆ ರೈತರು ಮತ್ತು ಬಡವರಿಗೆ ನೆರವಾಗುವ ದೃಷ್ಟಿಯಿಂದ ಈ ಕಾರ್ಯ ಮಾಡುತ್ತಿರುವುದಾಗಿ ಧರ್ಮರಾಜ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details