ಕಲಬುರಗಿ:ಕಳೆದ ಮೂರು ವರ್ಷಗಳ ಹಿಂದೆ ಕಾಣೆಯಾಗಿರುವ ಮಂಜುನಾಥನ ಹುಡುಕಾಟ ನಡೆಸಿರುವ ಸಹೋದರ ರಮೇಶ್, ಪೊಲೀಸ್ ಠಾಣೆ, ಎಸ್ಪಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಸಂಸದರ ಕಚೇರಿಗೆ ತೆರಳಿ ಕಾಣೆಯಾಗಿರುವ ತಮ್ಮನ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ.
3 ವರ್ಷದ ಹಿಂದೆ ಕಾಣೆಯಾದ ತಮ್ಮನ ಬರುವಿಕೆಯ ಹಾದಿ ನೋಡುತ್ತಿರುವ ಅಣ್ಣ - ಈಟಿವಿ ಭಾರತ್ ಕನ್ನಡ
ಕಾಣೆಯಾಗಿರುವ ತಮ್ಮನನ್ನು ಹುಡುಕಿಕೊಡಿ ಎಂದು ಸಹೋದರನೊಬ್ಬ ತಮ್ಮನ ಫೋಟೊ ಮತ್ತು ಪ್ರಕಟಣೆ ಪತ್ರಗಳನ್ನು ಹಿಡಿದು ಸಂಸದರ ಕಚೇರಿಗೆ ತೆರಳಿದ್ದಾನೆ.
ಕಾಣೆಯಾದ ಯುವಕನ ಸಹೋದರ
ಈ ಕುರಿತು ಮಾತನಾಡಿರುವ ರಮೇಶ್, ಪ್ರೀತಿಯಿಂದ ಸಾಕಿದ ತಮ್ಮ ಕಾಣೆಯಾಗಿ ಮೂರು ವರ್ಷ ಆಯ್ತು. ಇಲ್ಲಿವರೆಗೆ ಎಲ್ಲಿದ್ದಾನೆ ಅನ್ನೋ ಒಂದು ಚಿಕ್ಕ ಸುಳಿವೂ ಕೂಡಾ ಸಿಕ್ಕಿಲ್ಲ. ಮಗ ಕಾಣೆಯಾದ ಕೊರಗಿನಲ್ಲಿಯೇ ತಾಯಿ ಕೂಡಾ ಕೊನೆಯುಸಿರೆಳೆದಿದ್ದಾಳೆ. ನನ್ನ ಪ್ರೀತಿಯ ತಮ್ಮನನ್ನು ಹುಡುಕಿಕೊಡಿ ಎಂದು ಮಾಧ್ಯಮದ ಮುಂದೆ ನೋವು ತೋಡಿಕೊಂಡರು.
ಇದನ್ನೂ ಓದಿ:ವಿಚ್ಛೇದನ ನಿರಾಕರಿಸಿದ ಮಹಿಳೆಗೆ ಥಳಿಸಿದ ವಕೀಲ: ಕೋರ್ಟ್ ಆವರಣದಲ್ಲೇ ಘಟನೆ