ಕಲಬುರಗಿ: ಪಾರ್ಕ್ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಕಲಬುರಗಿ ನಗರದ ಎನ್.ಜಿ.ಓ ಕಾಲೋನಿ ಗಾರ್ಡನ್‌ನಲ್ಲಿ ನಡೆದಿದೆ.
ಆರು ವರ್ಷದ ಬಾಲಕ ಸಿದ್ದು ಮೃತ ದುರ್ದೈವಿ. ಪಾರ್ಕ್ನಲ್ಲಿ ಆಟವಾಡುತ್ತಿರುವಾಗ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ. ಮಳೆಯಿಂದ ವದ್ದೆಯಾಗಿದ್ದ ಗಾರ್ಡನ್‌ನಲ್ಲಿನ ವಿದ್ಯುತ್ ಕಂಬದಲ್ಲಿ ಕರೆಂಟ್ ಹರಿದಿದೆ. ಆಟವಾಡುತ್ತಿರುವಾಗ ಬಾಲಕ ಕರೆಂಟ್ ಕಂಬಕ್ಕೆ ಜೋತು ಬಿದ್ದಿದ್ದಾನೆ. ಈ ವೇಳೆ ಬಾಲಕ ಸಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.