ಕಲಬುರಗಿ:ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ. ಪ್ರಧಾನಿ ಮೋದಿ ಅವರು ಇದರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಂಶಪಾರಂಪರ್ಯ ರಾಜಕಾರಣ ಕುರಿತಾಗಿ ಬಿ.ಎಲ್.ಸಂತೋಷ್ ಹೇಳಿಕೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸುತ್ತಾ, ಒಂದೇ ಕುಟುಂಬದಲ್ಲಿ ಎಂಎಲ್ಎ, ಎಂಎಲ್ಸಿ, ಎಂಪಿ ಸೇರಿ ನಾಲ್ಕಾರು ಜನರಿರುವ ಸಂಪ್ರದಾಯ ಹೋಗಬೇಕು. ಲಾಬಿ ಮಾಡುವವರಿಗೆ, ಶಾಸಕರ ಶಕ್ತಿ ಪ್ರದರ್ಶನ ಮಾಡುವರಿಗೆ ಹಾಗೂ ಹಣಬಲ ಪ್ರದರ್ಶನ ಮಾಡುವುದೆಲ್ಲಾ ಬಿಜೆಪಿಯಲ್ಲಿ ನಡೆಯಲ್ಲ. ಉತ್ತರ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಅವರ ಮಗನನ್ನು ಮಂತ್ರಿ ಮಾಡಿಲ್ಲ. ಇದರಿಂದ ನಮ್ಮಲ್ಲೂ ಕೆಲವರಿಗೆ ನಡುಕ ಶುರುವಾಗಿದೆ. ಅಂತವರೆಲ್ಲ ಜಾಕೆಟ್ ತೆಗೆದಿಟ್ಟು ಕೈಗಾರಿಕೆ ಮಾಡಿಕೊಂಡು ಇರಲಿ. ರಾಜಕಾರಣವನ್ನು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬಿಡಲಿ ಎಂದರು.