ಕರ್ನಾಟಕ

karnataka

ETV Bharat / city

ಜಿಲ್ಲಾಡಳಿತ ಕಚೇರಿ ಎದುರು ರಾರಾಜಿಸುತ್ತಿರುವ ಬಿಜೆಪಿ ನಾಯಕರ ಬ್ಯಾನರ್​: ಸ್ಥಳೀಯರ ಆಕ್ರೋಶ - ಕಲಬುರಗಿ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ನಾಯಕರ ಬ್ಯಾನರ್

ಕಲಬುರಗಿ ನಗರಕ್ಕೆ ಇಂದು ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೋವಿಂದ ಕಾರಾಜೋಳ ಆಗಮಿಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ತಮ್ಮ ನಾಯಕರನ್ನು ಸ್ವಾಗತಿಸಲು ಪ್ಲೆಕ್ಸ್​ಗಳನ್ನು ಜಿಲ್ಲಾ ಆಡಳಿತ ಕೇಂದ್ರ ಕಚೇರಿ ಮುಂದೆ ಹಾಕಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

BJP leaders Banners

By

Published : Oct 17, 2019, 2:54 PM IST

ಕಲಬುರಗಿ: ಇಂದು ನಗರಕ್ಕೆ ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೋವಿಂದ ಕಾರಾಜೋಳ ಆಗಮಿಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ತಮ್ಮ ನಾಯಕರನ್ನು ಸ್ವಾಗತಿಸಲು ಪ್ಲೆಕ್ಸ್​ಗಳನ್ನು ಜಿಲ್ಲಾ ಆಡಳಿತ ಕೇಂದ್ರ ಕಚೇರಿ ಮುಂದೆ ಹಾಕಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ನಾಯಕರ ಬ್ಯಾನರ್

ಸರ್ಕಾರ ತಮ್ಮದೇ ಎಂದು ಅಧಿಕಾರ ದುರ್ಬಳಕೆ ಮಾಡಿಕೊಂಡು ಜಿಲ್ಲಾಡಳಿತ ಕೇಂದ್ರ ಕಚೇರಿ ಹೆಬ್ಬಾಗಿಲಿಗೆ ಪ್ಲೆಕ್ಸ್, ಬ್ಯಾನರ್​ ಕಟೌಟ್​ಗಳನ್ನು ನಿಲ್ಲಿಸಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ? ಇದು ಬಿಜೆಪಿ ಕಚೇರಿಯೋ ಅಥವಾ ಜಿಲ್ಲಾಡಳಿತ ಕಚೇರಿ ಎಂದು ಜನರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಸಿಎಂ ಮಹಾರಾಷ್ಟ್ರ ಪ್ರಚಾರ ಮುಗಿಸಿ ಹೆಲಿಕಾಪ್ಟರ್ ಮೂಲಕ ಕಲಬುರ್ಗಿ ನಗರಕ್ಕೆ ಆಗಮಿಸಲಿದ್ದಾರೆ. ಬಳಿಕ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆದು, ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಇವರಿಗೆ ಡಿಸಿಎಂ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಸಾಥ್ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಕಲಬುರಗಿ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಿಎಂ ತೆರಳಿದ ಮೇಲೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ABOUT THE AUTHOR

...view details