ಕರ್ನಾಟಕ

karnataka

ETV Bharat / city

ಸಂಪೂರ್ಣ ಸಾಲ ಮನ್ನಾ ಆಗುವವರೆಗೆ ಅಧಿವೇಶನ ಮಾಡಲು ಬಿಡಲ್ಲ: ಬಿಎಸ್​ವೈ - Kalaburagi

ಚಿಂಚೋಳಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾಜಿ ಸಿಎಂ ಬಿಎಸ್​ವೈ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ

By

Published : May 13, 2019, 6:07 PM IST

ಕಲಬುರಗಿ: ರೈತರ ಸಾಲ ಸಂಪೂರ್ಣ ಮನ್ನಾ ಮಾಡುವವರೆಗೆ ಅಧಿವೇಶನ ಮಾಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಉಪ ಚುನಾವಣೆ ಹಿನ್ನೆಲೆ‌ ಚಿಂಚೋಳಿ ತಾಲೂಕಿನ ಚಿಮ್ಮನಚೂಡದಲ್ಲಿ ಜರುಗಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೇ. 27 ರಂದು ಬೆಂಗಳೂರಿನಲ್ಲಿ ಪಕ್ಷದ ಮುಖಂಡರ ಜತೆ ಸಭೆ ನಡೆಸಿ ರಾಜ್ಯಾದ್ಯಂತ ಸರ್ಕಾರದ ವಿರುದ್ದ ಹೋರಾಟ ಮಾಡುವ ಬಗ್ಗೆ ರೂಪುರೇಷೆ ಸಿದ್ದಪಡಿಸುವದಾಗಿ ಹೇಳಿದರು. ಅದರಂತೆ ಚಿಂಚೋಳಿಯಲ್ಲಿ ಸಕ್ಕರೆ ಕಂಪನಿ ಸ್ಥಾಪನೆಗೆ ಬದ್ಧವಾಗಿದ್ದು, ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಮಾಜಿ ಸಚಿವ ಬಾಬುರಾವ್​ ಚಿಂಚನಸೂರರ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು.

ಒಂದು ವರ್ಷದಿಂದ ಚಿಂಚೋಳಿ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ, ಅಭಿವೃದ್ಧಿಗಾಗಿ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಕಳಿಸಿ, ದಿನದ 24 ಗಂಟೆ ನಿಮ್ಮ ಮಗನಾಗಿ ಸೇವೆ ಸಲ್ಲಿಸುವೆ. ರಾಜ್ಯದಲ್ಲಿ ಚಿಂಚೋಳಿ ಕ್ಷೇತ್ರವನ್ನು ಮಾದರಿಯನ್ನಾಗಿಸುವೆ ಎಂದು ಅಭ್ಯರ್ಥಿ ಡಾ. ಅವಿನಾಶ್​ ಜಾಧವ್ ಮತ ಯಾಚಿಸಿದರು.

ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ ಜನರು

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸೋಲುವ ಭಯದಿಂದ ಇಡೀ ರಾಜ್ಯ ಸರ್ಕಾರವೇ ಚಿಂಚೋಳಿಗೆ ಶಿಫ್ಟ್ ಆಗಿದೆ. ವಿಧಾನ ಸೌಧದಿಂದ ರಾಜ್ಯಭಾರ ಮಾಡಬೇಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್​ನಲ್ಲಿ ಮಜಾ ಮಾಡ್ತಿದ್ದಾರೆ. ಒಬ್ಬ ಡಾ. ಅವಿನಾಶ ಜಾಧವ್​ರನ್ನು ಸೋಲಿಸಲು‌ ಸರ್ಕಾರವೇ ಚಿಂಚೋಳಿಯಲ್ಲಿ ಬಿಡಾರ ಹೂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ತಿಗಣಿ ಇದ್ದಂತೆ, ಐವತ್ತು ವರ್ಷದಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷ ದೇಶದ ಜನತೆಯ ರಕ್ತ ಹೀರುತ್ತಿದೆ. ಮನೆಯಲ್ಲಿರುವ ಒಂದೆರಡು ತಿಗಣಿಗಳ ಕಾಟವೇ ತಾಳಲು ಆಗುತ್ತಿಲ್ಲ. ಇನ್ನು ದೇಶದಲ್ಲಿ ಲಕ್ಷಾಂತರ ಕಾಂಗ್ರೆಸ್ ತಿಗಣಿಗಳ ಕಾಟ ನಿಯಂತ್ರಿಸಲು ಮೋದಿ ಅವರ ರಾಮಬಾಣವೇ ದಿವ್ಯ ಔಷಧವಾಗಿದೆ ಎಂದು ಕುಡಜಿ ಶಾಸಕ ಪಿ. ರಾಜೀವ್ ಹೇಳಿದರು.

For All Latest Updates

TAGGED:

Kalaburagi

ABOUT THE AUTHOR

...view details