ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ಬೈಕ್ - ಟ್ಯಾಂಕರ್ ಡಿಕ್ಕಿ: ಯುವಕ ಸಾವು, ಯುವತಿಗೆ ಗಂಭೀರ ಗಾಯ - one Death

ಬೈಕ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಭೋಪಾಲ ತೆಗ್ಗನೂರ ಗ್ರಾಮದ ಸುದರ್ಶನ (25) ಎಂಬುವವರು ಸಾವನ್ನಪ್ಪಿದ್ದು, ಬೈಕ್​ನ ಹಿಂದೆ ಕುಳಿತಿದ್ದ ಹುಡುಗಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Bike - tanker accident
ಬೈಕ್ - ಟ್ಯಾಂಕರ್ ಡಿಕ್ಕಿ: ಯುವಕನ ಸಾವು

By

Published : Mar 14, 2022, 8:26 PM IST

ಕಲಬುರಗಿ: ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಬೈಕ್ ಹಿಂಬದಿ ಕುಳಿತಿದ್ದ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ನಗರ ಹೊರವಲಯದ ಕೇಂದ್ರ ಕಾರಾಗೃಹದ ಬಳಿ ಸಂಭವಿಸಿದೆ.

ಮೃತನನ್ನು ಭೋಪಾಲ ತೆಗ್ಗನೂರ ಗ್ರಾಮದ ಸುದರ್ಶನ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿಯಿಂದ ಜೇವರ್ಗಿ ರಸ್ತೆಗೆ ಹೋಗುತ್ತಿದ್ದಾಗ ಕಾರಾಗೃಹದ ಬಳಿ ಅಪಘಾತ ಸಂಭವಿಸಿದೆ. ಗಾಯಗೊಂಡ ಯುವತಿಯ ಹೆಸರು ತಿಳಿದು ಬಂದಿಲ್ಲ. ಈ ಕುರಿತಾಗಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟ್​ನಲ್ಲಿ ಕಾರು ಕಂದಕಕ್ಕೆ ಉರುಳಿ ನಾಲ್ವರಿಗೆ ಗಾಯ : ಸ್ನಾನಕ್ಕೆ ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಸಾವು

ABOUT THE AUTHOR

...view details