ಕಲಬುರಗಿ:ಭೀಮಾ ಪ್ರವಾಹದಿಂದ ಅಫಜಲಪುರ ತಾಲೂಕಿನ ಉಡಚಣ ಗ್ರಾಮಕ್ಕೆ ಎರಡು ಕಡೆಯಿಂದ ನೀರು ನುಗ್ಗಿದ್ದು, ನಡುಗಡ್ಡೆಯಾಗಿ ಪರಿವರ್ತನೆಗೊಂಡಿದೆ.
ಭೀಮಾ ಪ್ರವಾಹ: ನಡುಗಡ್ಡೆಯಾದ ಉಡಚಣ ಗ್ರಾಮ, 225 ಜನರ ರಕ್ಷಣೆ.. - ಉಡಚಣ ಗ್ರಾಮ ಭೀಮಾ ನದಿ
ಉಡಚಣ ಗ್ರಾಮ ಭೀಮಾ ನದಿ ತಟದಲ್ಲಿದ್ದು, ಗ್ರಾಮಕ್ಕೆ ಒಂದಡೆ ನದಿಯಿಂದ ನೇರವಾಗಿ ನೀರು ನುಗ್ಗಿದ್ದು, ಇನ್ನೊಂದೆಡೆ ಅದರ ಹಿನ್ನೀರು ಊರೊಳಗೆ ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ 225 ಜನ ಉಡಚಣ ಗ್ರಾಮಸ್ಥರನ್ನು ಎನ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಭೀಮಾ ಪ್ರವಾಹ: ನಡುಗಡ್ಡೆಯಾದ ಉಡಚಣ ಗ್ರಾಮ, 225 ಜನರ ರಕ್ಷಣೆ..
ಉಡಚಣ ಗ್ರಾಮ ಭೀಮಾ ನದಿ ತಟದಲ್ಲಿದ್ದು, ಗ್ರಾಮಕ್ಕೆ ಒಂದಡೆ ನದಿಯಿಂದ ನೇರವಾಗಿ ನೀರು ನುಗ್ಗಿದ್ದು, ಇನ್ನೊಂದೆಡೆ ಹಿನ್ನೀರು ಗ್ರಾಮಕ್ಕೆ ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ 225 ಜನ ಉಡಚಣ ಗ್ರಾಮಸ್ಥರನ್ನು ಎನ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೋಟ್ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಮಹಾರಾಷ್ಟ್ರದಿಂದ 8 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ ಗೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟ ಪರಿಣಾಮ ಪ್ರವಾಹ ಉಂಟಾಗಿದೆ. ಜಿಲ್ಲೆಯ 157 ಹಳ್ಳಿಗಳಿಗೆ ಜಲ ಕಂಟಕ ಎದುರಾಗಿದೆ.