ಕರ್ನಾಟಕ

karnataka

ETV Bharat / city

ಅಯೋಧ್ಯೆ ತೀರ್ಪು ಹಿನ್ನೆಲೆ : ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ, ಸೋಷಿಯಲ್ ಮೀಡಿಯಾ ಮೇಲೆ ಖಾಕಿ ಕಣ್ಣು - Ayodhyaverdict

ಅಯೋಧ್ಯೆ ತೀರ್ಪು ಪ್ರಕಟಗೊಂಡಿರುವ ಹಿನ್ನೆಲೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಬಿಗಿ ಪೊಲೀಸ್​ ಭದ್ರತೆ ವಹಿಸಲಾಗಿದೆ.

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ

By

Published : Nov 9, 2019, 9:37 AM IST

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಬಿಗಿ ಪೊಲೀಸ್​ ಭದ್ರತೆ ವಹಿಸಲಾಗಿದೆ.

ಹಾವೇರಿಯಲ್ಲಿ ನಿಷೇಧಾಜ್ಞೆ :

ಹಾವೇರಿ: ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಬೆಳಿಗ್ಗೆ ಎಂಟು ಗಂಟೆಯಿಂದ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶಿಸಿದ್ದಾರೆ.

ಕೋಲಾರದಲ್ಲಿ ಪೊಲೀಸ್​ ಬಿಗಿ ಭದ್ರತೆ :

ಕೋಲಾರ: ಜಿಲ್ಲಾದ್ಯಂತ ನಿನ್ನೆ ಮಧ್ಯ ರಾತ್ರಿ 12 ಗಂಟೆಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಾದ ದೇವಾಲಯ, ಮಸೀದಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಸಂದೇಶ ರವಾನೆ ಮಾಡದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಜೊತೆಗೆ ವಾಟ್ಸ್​ಆ್ಯಪ್​​​, ಫೇಸ್​ಬುಕ್​ ಮೇಲೆ‌ ನಿಗಾ ಇಡಲಾಗಿದೆ.

ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ

ಕೆಎಸ್​ಆರ್​ಟಿಸಿಯಲ್ಲೂ ಮುನ್ನೆಚ್ಚರಿಕಾ ಕ್ರಮ:

ಬೆಂಗಳೂರು: ಎಲ್ಲಾ ಡಿಸಿಗಳು ಮತ್ತು ವಿಭಾಗೀಯ ಅಧಿಕಾರಿಗಳು, ಡಿಪೋ ವ್ಯವಸ್ಥಾಪಕರು ತಮ್ಮ ಪ್ರಧಾನ ಕಚೇರಿಯಲ್ಲಿರಬೇಕು. ಬಸ್​ಗಳನ್ನು ನಿರ್ವಹಿಸುವಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವಂತೆ ನಿರ್ದೇಶನ ನೀಡಲಾಗಿದೆ. ಬಸ್ ಗಳ ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ವರದಿಯಾದರೆ, ತಕ್ಷಣವೇ ಅದನ್ನು ಕೇಂದ್ರ ಕಚೇರಿಯಲ್ಲಿನ ನಿಯಂತ್ರಣ ಕೊಠಡಿಗೆ ತಿಳಿಸಬೇಕು ಎಂದು ಕೆಎಸ್​ಆರ್​ಟಿಸಿ ಸೂಚನೆ ನೀಡಿದೆ.

ಗಣಿನಾಡಿನಲ್ಲಿ ಕಟ್ಟೆಚ್ಚರ :

ಬಳ್ಳಾರಿ: ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಕೆಎಸ್ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಬಳ್ಳಾರಿ ನಗರ, ಸಿರುಗುಪ್ಪ, ಹೊಸಪೇಟೆ, ಹೂವಿನ ಹಡಗಲಿಯಲ್ಲಿ ತಲಾ ಒಂದೊಂದು ಕೆಎಸ್​ಆರ್​ಪಿ ತುಕಡಿಗಳಗಳನ್ನ ನಿಯೋಜನೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ‌ ಸೈಬರ್ ಕ್ರೈಂ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.

ಚಿತ್ರದುರ್ಗದಲ್ಲಿ ಖಾಕಿ ಅಲರ್ಟ್ :

ಚಿತ್ರದುರ್ಗ: ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ. ಈಗಾಗಲೇ ನಗರದಲ್ಲಿ ನಾಲ್ಕು ಕೆಎಸ್ಆರ್​ಪಿ ತುಕಡಿ ಹಾಗೂ ಆರು ಡಿಎಆರ್​ಗಳನ್ನು ನಿಯೋಜಿಸಲಾಗಿದೆ‌. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಎಸ್ಪಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದು, ಇಂದು ಬೆಳಗ್ಗೆಯಿಂದಲೇ ಪೋಲಿಸರು ಗಸ್ತು ತಿರುಗುತ್ತಿದ್ದಾರೆ.

ಕೊಪ್ಪಳದಲ್ಲಿ ಶಾಲಾ-ಕಾಲೇಜು ರಜೆ :

ಕೊಪ್ಪಳ: ಜಿಲ್ಲಾದ್ಯಂತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮೈಕ್ ಮೂಲಕ ಅನೌನ್ಸ್‌ ಮಾಡಲಾಗುತ್ತಿದೆ. ಯಾವುದೇ ಸಭೆ, ಸಮಾರಂಭ, ವಿಜಯೋತ್ಸವ, ಪ್ರತಿಭಟನೆ ನಡೆಸುವಂತಿಲ್ಲ. ಅಲ್ಲದೆ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಅಥವಾ ವಿರೋಧ ಪ್ರತಿಕ್ರಿಯೆ, ಲೈಕ್, ಶೇರ್ ಮಾಡುಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅವರ ವಿರುದ್ಧ ವಾರೆಂಟ್ ಇಲ್ಲದೆ ಬಂಧಿಸಲಾಗುವುದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇನ್ನು ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ರಜೆ ಘೋಷಣೆ‌‌‌ ಮಾಡಿದ್ದಾರೆ.

ABOUT THE AUTHOR

...view details