ಕಲಬುರಗಿ: ವಾಮಾಚಾರ ಮಾಡಿ ತಮ್ಮ ಮನೆಯ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಘಟನೆಯ ವಿವರ:
ಕಲಬುರಗಿ: ವಾಮಾಚಾರ ಮಾಡಿ ತಮ್ಮ ಮನೆಯ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಘಟನೆಯ ವಿವರ:
ಶಹಾಬಜಾರ್ ತಾಂಡಾ ನಿವಾಸಿ ಖಾಸಿಪತಿ ಎಂಬಾತನನ್ನು ಯುವತಿಯ ಸಂಬಂಧಿಕರು ಕಾರಿನಲ್ಲಿ ಕೂರಿಸಿಕೊಂಡು, ವಾಹನ ಚಲಿಸುತ್ತಿರುವಾಗಲೇ ಹಲ್ಲೆ ಮಾಡಿದ್ದಾರೆ. ಬಳ್ಳಾರಿ ಮೂಲದ ಯುವತಿಯನ್ನು ಖಾಸಿಪತಿ ಎಂಬಾತ ಮದುವೆಯಾಗಿದ್ದನಂತೆ. ವಾಮಾಚಾರ ಮಾಡಿ, ಮನೆಯವರಿಗೆ ಹೇಳದೆ ಯುವತಿ ಮನೆಬಿಟ್ಟು ಬರುವಂತೆ ಮಾಡಿ ಮದುವೆಯಾಗಿದ್ದಾನೆ ಎಂಬುದು ಯುವತಿ ಕಡೆಯವರ ಆರೋಪ.
ಇದನ್ನೂ ಓದಿ:ಫಲ್ಗುಣಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಬಾಲಕ ಸಾವು
ಈ ಹಿನ್ನೆಲೆಯಲ್ಲಿ ಯುವತಿ ಕುಟುಂಬದ ನಾಲ್ವರು ಯುವಕರು ಸೇರಿ ಖಾಸಿಪತಿಗೆ ಕಾರಿನಲ್ಲೇ ಕೂರಿಸಿಕೊಂಡು ಮನಸೋಇಚ್ಛೆ ಹೊಡೆದಿದ್ದಲ್ಲದೇ, ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಕಲಬುರಗಿಯ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.