ಕಲಬುರಗಿ:ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಸಹಾಯಕ ತೋಟಾಧಿಕಾರಿ ರಾಜಕುಮಾರ ಗೋವಿನ್ ಎಂಬುವವರಿಗೆಗೆ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕಳೆದ 2020 ಫೆ.13 ರಂದು ನಗರದ ಬಾಳೆ ಲೇಔಟ್ ಪ್ರದೇಶದಲ್ಲಿರುವ ಕಟ್ಟಡ ವಿಷಯವಾಗಿ ಸಹಾಯಕ ತೋಟಾಧಿಕಾರಿ ರಾಜಕುಮಾರ ತನ್ನ ಪಕ್ಕದ ಮನೆಯ ದಿ. ವಿಠ್ಠಲ್ ಖೇಡ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.