ಕರ್ನಾಟಕ

karnataka

ETV Bharat / city

ತುಕ್ಡೆ-ತುಕ್ಡೆ ಹೇಳಿಕೆ: ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​ಗೆ ಬಂಧನದ ಭೀತಿ - ಕಲಬುರಗಿ ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​ಗೆ ಬಂಧನದ ಭೀತಿ

ಅಜ್ಞಾತ ಸ್ಥಳದಿಂದಲೇ ಮುಕ್ರಂಖಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಜಾಮೀನು ಅರ್ಜಿಯನ್ನು ಕಲಬುರಗಿ ನಾಲ್ಕನೇ ಹೆಚ್ಚುವರಿ ನ್ಯಾಯಾಲಯವು ವಿಚಾರಣೆ ನಡೆಸಿ ವಜಾಗೊಳಿಸಿ ಆದೇಶ ಹೊರಡಿಸಿದೆ.

mukram
mukram

By

Published : Mar 8, 2022, 10:16 AM IST

ಕಲಬುರಗಿ: ಹಿಜಾಬ್ ತಂಟೆಗೆ ಬಂದರೆ ತುಕ್ಡೆ - ತುಕ್ಡೆ ಮಾಡುವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮುಕ್ರಂಖಾನ್​​​​ಗೆ ಬಂಧನದ ಭೀತಿ ಶುರುವಾಗಿದೆ.

ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಮುಕ್ರಂಖಾನ್ ಹಿಜಾಬ್ ತಂಟೆಗೆ ತುಕ್ಡೆ - ತುಕ್ಡೆ ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಮುಕ್ರಂಖಾನ್ ತಲೆಮರೆಸಿಕೊಂಡಿದ್ದರು.

ಅಜ್ಞಾತ ಸ್ಥಳದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಮುಕ್ರಂಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿ ನಾಲ್ಕನೇ ಹೆಚ್ಚುವರಿ ನ್ಯಾಯಾಲಯವು ವಿಚಾರಣೆ ನಡೆಸಿ ವಜಾಗೊಳಿಸಿ ಆದೇಶನ್ನು ಹೊರಡಿಸಿದೆ. ಹೀಗಾಗಿ ಮುಕ್ರಂಖಾನ್​​ನನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ‌.

ಇದನ್ನೂ ಓದಿ: ಹಿಜಾಬ್‌ ವಿರೋಧಿಸುವವರಿಗೆ ಬೆದರಿಕೆ ಆರೋಪ: ಕೈ ಮುಖಂಡ ಮುಕ್ರಂಖಾನ್ ವಿರುದ್ಧ ಎಫ್‌ಐಆರ್‌

For All Latest Updates

ABOUT THE AUTHOR

...view details