ಕಲಬುರಗಿ:ಸರ್ಕಾರ ಬಿದ್ದರೂ ಪರ್ವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದ. ಕಿಂಗ್ ಪಿನ್ ಯಾರು ಅಂತಾ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸವಾಲು ಹಾಕಿದ್ದಾರೆ.
ಕಿಂಗ್ ಪಿನ್ ಹೆಸರು ಹೇಳಿದರೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಹೆಚ್.ಡಿ.ಕೆ ಹೇಳಿಕೆ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರ ಸ್ವಾಮಿ ಅವರು ಬರೀ ಹಿಟ್ ಅಂಡ್ ರನ್ ಮಾಡಬಾರದು. ಕಿಂಗ್ ಪಿನ್ ಯಾರು ಅಂತಾ ಹೇಳಲಿ. ದಾಖಲೆಗಳು ಇದರೆ ನಮ್ಮಗೆ ಕೊಡಲಿ, ನಾವು ತನಿಖೆ ನಡೆಸುತ್ತೆವೆ. ಇದರಿಂದ ಸರ್ಕಾರ ಬಿದ್ದರು ಸಹ ಪರವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದವಿದೆ ಎಂದಿದ್ದಾರೆ.