ಕಲಬುರಗಿ :ಹಾಡುಹಗಲೇ ಕೆಲ ಗೂಂಡಾಗಳು ಸೇಡಂ ರಸ್ತೆಯ ಸಿದ್ದೇಶ್ವರ ಕಾಲೋನಿಗೆ ನುಗ್ಗಿ ಗಾರ್ಡನ್ ಪ್ರದೇಶದಲ್ಲಿರುವ ಹನುಮಾನ ದೇವಸ್ಥಾನ ನೆಲ ಸಮಗೊಳಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶುಕ್ರವಾರ ಮಧ್ಯಾಹ್ನದ ವೇಳೆ ಎರಡು ಜೆಸಿಬಿ ಸಮೇತ ನುಗ್ಗಿದ 10 ರಿಂದ 12 ಜನ ಗೂಂಡಾಪಡೆ, ಕಾಲೋನಿಯ ಜನರನ್ನು ಹೆದರಿಸಿ ಗಾರ್ಡನ್ ಸ್ಥಳದಲ್ಲಿದ್ದ ಹನುಮಾನ ದೇವಸ್ಥಾನ, ಗಾರ್ಡನ್ ಕಾಂಪೌಂಡ್, ಗಿಡ-ಮರಗಳನ್ನು ನೆಲಸಮ ಮಾಡಲು ಯತ್ನಿಸಿದ್ದಾರೆ.
ಗಾರ್ಡನ್ ಜಾಗ ಕಬಳಿಕೆ ಯತ್ನ ಆರೋಪ.. ಜಿಲ್ಲಾಡಳಿತ ಮಧ್ಯ ಪ್ರವೇಶಕ್ಕೆ ಸ್ಥಳೀಯರು ಆಗ್ರಹಿಸಿರುವುದು.. ಬಡಾವಣೆಯ ಜನರು ಒಟ್ಟಾಗಿ ಬಂದಾಗ ಗೂಂಡಾಗಳು ಕಾಲ್ಕಿತ್ತಿದ್ದಾರೆ. ಆನಂದ ಶಿಕ್ಷಣ ಸಂಸ್ಥೆಯವರು ಈ ದುಷ್ಕೃತ್ಯವೆಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೇಡಂ ರಸ್ತೆಯ ಸಿದ್ದೇಶ್ವರ ಕಾಲೋನಿ ವ್ಯಾಪ್ತಿಯಲ್ಲಿ 'ಸ್ವಾಮಿ ಲೇಔಟ್' ಹಾಗೂ 'ಯುನಿವರ್ ಸಿಟಿ ಎಪ್ಲಾಯರ್ಸ್' ಎಂಬ ಹೆಸರಿನಲ್ಲಿ ಎರಡು ಲೇಔಟ್‌ಗಳಿವೆ. ಅಲ್ಲದೇ ಎರಡು ಗಾರ್ಡನ್ ಕೂಡ ಇವೆ. ಆದರೆ, ಕೆಲವರು ಗಾಡರ್ನ್ ಜಾಗ ಕಬಳಿಸಲು ಪಂಚಾಯತ್‌ನಲ್ಲಿ ಲೇಔಟ್ ತಿದ್ದುಪಡಿ ಮಾಡಿಸಿದ್ದಾರೆ.
ಹನುಮಾನ ದೇವಸ್ಥಾನ ನೆಲ ಸಮಗೊಳಿಸಲು ಯತ್ನ: ಸ್ಥಳೀಯರ ಆರೋಪ 2002ರಿಂದ ಗಾರ್ಡನ್ ಪ್ರದೇಶಲ್ಲಿ ಹನುಮಾನ ದೇವಸ್ಥಾನ ಇದ್ದರೂ, 2014ರಲ್ಲಿ ಕಾನೂನು ಬಾಹಿರವಾಗಿ ಲೇಔಟ್ ತಿದ್ದುಪಡಿ ಮಾಡಿ ಖಾಸಗಿ ವ್ಯಕ್ತಿಯ ಹೆಸರಿಗೆ ಗಾರ್ಡನ್ ಜಾಗವನ್ನ ಅಲೌಟ್‌ಮೆಂಟ್ ಮಾಡಿಸಿಕೊಂಡಿದ್ದಾರೆ. ಗಾರ್ಡನ್ ಜಾಗದ ವಿಷಯ ಸದ್ಯ ಕೋರ್ಟ್‌ನಲ್ಲಿದೆ. ಆದರೂ ಆನಂದ ಶಿಕ್ಷಣ ಸಂಸ್ಥೆಯವರು ಪದೇಪದೆ ಇಂತಹ ದುಷ್ಕೃತ್ಯವೆಸಗುತ್ತಾ ಸ್ಥಳೀಯರನ್ನು ಹೆದರಿಸುತ್ತಿದ್ದಾರೆ. ದೂರು ಕೊಡಲು ಹೋದರೆ ಪೊಲೀಸರು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮವಾಗಿ ಲೇಔಟ್ ತಿದ್ದುಪಡಿ ಮಾಡಿದ ಪಂಚಾಯತ್ ಅಧಿಕಾರಿ, ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಗಾರ್ಡನ್ ಪ್ರದೇಶ ಕಬಳಿಸಲು ಯತ್ನಿಸಿದವರ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ನ್ಯಾಯಾಲಯದ ತೀರ್ಪು ಬರುವವರೆಗೆ ಅಕ್ರಮವಾಗಿ ಯಾರು ನುಸುಳದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಬೇಕೆಂದು ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ.