ಕಲಬುರಗಿ: ಶಹಬಾದ್ ತಾಲೂಕಿನ ತೊನಸನಳ್ಳಿ ಗ್ರಾಮದ ಬಳಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ (lorry accident at kalburgi) ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನವಾಗಿದ್ದಾರೆ.
ಸಕ್ಕರೆ ಚೀಲ ತುಂಬಿದ ಲಾರಿ ಹಾಗೂ ಲಿಕ್ಕರ್ ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಶಹಾಬಾದ್-ಜೇವರ್ಗಿ ನಡುವಿನ ಮುಖ್ಯ ರಸ್ತೆಯಲ್ಲಿರುವ ತೊನಸನಳ್ಳಿ ಗ್ರಾಮದ ಬಳಿ ಎರಡು ಲಾರಿಗಳು ವೇಗವಾಗಿ ಬಂದು ಮುಖಾಮುಖಿ ಡಿಕ್ಕಿಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
2ಗಂಟೆಗೂ ಹೆಚ್ಚು ಕಾಲ ಲಾರಿಗಳು ಹೊತ್ತಿ ಉರಿದಿದ್ದು, ಚಿತ್ತಾಪುರ ಹಾಗೂ ಜೇವರ್ಗಿಯಿಂದ ಆಗಮಿಸಿದ ಎರಡು ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಎರಡು ಲಾರಿಯ ಚಾಲಕರು ಸೇರಿ ಸಜೀವ ದಹನವಾಗಿದ್ದಾರೆ.