ಕಲಬುರಗಿ:ನಗರದ ಗುಬ್ಬಿ ಕಾಲೋನಿಯಲ್ಲಿರುವ ಪಿಡಬ್ಲೂಡಿ ಜೆ.ಇ. ಶಾಂತಗೌಡ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ದಾಳಿಗೂ ಮುನ್ನ ಶಾಂತಗೌಡ ಅವರು ಡ್ರೈನೇಜ್ ಪೈಪ್ನಲ್ಲಿ ಕಂತೆ ಕಂತೆ ಹಣ ಹಾಕಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಶಾಂತಗೌಡ ಅವರ ಮನೆಯ ಪೈಪ್ಗಳಲ್ಲಿ ಹಣದ ಜೊತೆಗೆ ಚಿನ್ನಾಭರಣ ಕೂಡ ಪತ್ತೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಇಂದು ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದಾಗ ಅನುಮಾನಗೊಂಡ ಶಾಂತಗೌಡ 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಪೈಪ್ನಲ್ಲಿ ಹಣ, ಚಿನ್ನಾಭರಣವನ್ನು ಬಿಸಾಕಿದ್ದಾರೆ ಎಂದು ಹೇಳಲಾಗ್ತಿದೆ.