ಕಲಬುರಗಿ: ಭೂ ಸ್ವಾಧೀನ ಪರಿಹಾರ ಚೆಕ್ ನೀಡಲು ರೈತರೋರ್ವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಅಧಿಕಾರಿಯನ್ನು ಎಸಿಬಿ ತಂಡ ಬಲೆಗೆ ಕೆಡವಿದ್ದಾರೆ. ಕಲಬುರಗಿಯ ಭೂಸ್ವಾಧೀನ ಇಲಾಖೆ ಕಚೇರಿಯ ವ್ಯವಸ್ಥಾಪಕ ಶರಣಬಸಪ್ಪ ಜಾಲಹಳ್ಳಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ ಎಂದು ತಿಳಿದುಬಂದಿದೆ. ರೈತರೋರ್ವರಿಗೆ ಭೂಸ್ವಾಧೀನ ಪರಿಹಾರ ಚೆಕ್ ಪಡೆಯಲು ಶೇ.1 ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.
ಕಲಬುರಗಿ ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯವಸ್ಥಾಪಕ - Saranabasappa Jalahalli, Manager of the Land Acquisition Department, arrested
ಭೂ ಸ್ವಾಧೀನ ಪರಿಹಾರ ಚೆಕ್ ನೀಡಲು ರೈತರೋರ್ವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಗೆ ಎಸಿಬಿ ಬಲೆ ಹಾಕಿದೆ. ಕಲಬುರಗಿಯ ಭೂಸ್ವಾಧೀನ ಇಲಾಖೆ ಕಚೇರಿಯ ವ್ಯವಸ್ಥಾಪಕ ಶರಣಬಸಪ್ಪ ಜಾಲಹಳ್ಳಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ.
ಕಲಬುರಗಿ ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ವ್ಯವಸ್ಥಾಪಕ
ಸುರಪೂರದ ರೈತ ರಾಜಾ ನಾಯಕ್ ಬಳಿ ಭೂಸ್ವಾಧೀನದ ಪರಿಹಾರವಾಗಿ 14 ಲಕ್ಷ 85 ಸಾವಿರ ಮೊತ್ತದ ಚೆಕ್ ಪಡೆಯಲು ಶರಣಬಸಪ್ಪ 14,850 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದು, ರೈತನಿಂದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶರಣಬಸಪ್ಪನವರನ್ನು ಬಂಧಿಸಿದ್ದಾರೆ. ರೈತ ರಾಜಾ ನಾಯಕ್ ನೀಡಿದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸದ್ಯ ಭ್ರಷ್ಟ ಅಧಿಕಾರಿ ಶರಣಸಪ್ಪ ಜಾಲಹಳ್ಳಿಯನ್ನು ಬಂಧಿಸಲಾಗಿದೆ.
ಓದಿ :ಮಾಜಿ ಸಚಿವ ಈಶ್ವರಪ್ಪ ಮೊಮ್ಮಗನ ಮದುವೆ.. ನವ ಜೋಡಿಗೆ ಆಶೀರ್ವದಿಸಿದ ಸಿಎಂ ಬೊಮ್ಮಾಯಿ
Last Updated : Apr 21, 2022, 8:56 AM IST