ಕರ್ನಾಟಕ

karnataka

ETV Bharat / city

'ಪಕ್ಕದಲ್ಲೇ ಬಾಂಬ್ ಸ್ಫೋಟ ಆಯ್ತು, ಓಡಿ ಪ್ರಾಣ ಉಳಿಸಿಕೊಂಡೆ': ಭೀಕರತೆ ಬಿಚ್ಚಿಟ್ಟ ಕಲಬುರಗಿ ಯುವತಿ - A young lady Returning from Ukraine to kalaburagi

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಿಲುಕಿದ ಕಲಬುರಗಿಯ ಬಿದ್ದಾಪುರ ಕಾಲೋನಿ ಯುವತಿ ಪ್ರಿಯಾ ಪಾಟೀಲ್ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದ ಪ್ರಿಯಾ ಪಾಟೀಲ್ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

kalaburagi
ಕಲಬುರಗಿ ಯುವತಿ

By

Published : Mar 7, 2022, 10:53 PM IST

Updated : Mar 7, 2022, 11:01 PM IST

ಕಲಬುರಗಿ:ನಾವು ವಾಸ ಮಾಡುವ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಬಾಂಬ್‌ಗಳು ಬೀಳುತ್ತಿದ್ದವು. ಅಡುಗೆಗೆ ಸಾಮಾನು ತರಲು ಹೊರಗೆ ಹೋದಾಗ ಪಕ್ಕದಲ್ಲೆ ಬಾಂಬ್ ಸಿಡೀತು. ಸ್ವಲ್ಪದರಲ್ಲಿಯೇ ಪಾರಾಗಿ ಓಡಿ ಪ್ರಾಣ ಉಳಿಸಿಕೊಂಡೆ! ಇದು ಉಕ್ರೇನ್ ಯುದ್ದಭೂಮಿಯಿಂದ ಸೇಫ್ ಆಗಿ ಮರಳಿದ ಕಲಬುರಗಿ ಯುವತಿಯ ಆತಂಕದ ನುಡಿಗಳು.

ಉಕ್ರೇನ್​ ಭೀಕರತೆಯನ್ನು ಬಿಚ್ಚಿಟ್ಟ ಕಲಬುರಗಿ ಯುವತಿ

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಿಲುಕಿದ ಕಲಬುರಗಿಯ ಬಿದ್ದಾಪುರ ಕಾಲೋನಿ ಯುವತಿ ಪ್ರಿಯಾ ಪಾಟೀಲ್ ಸುರಕ್ಷಿತವಾಗಿ ಮನೆ ತಲುಪಿದ್ದಾರೆ. ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದ ಪ್ರಿಯಾ ಪಾಟೀಲ್ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜೀವ ಕೈಯಲ್ಲಿ ಹಿಡಿದು ಖಾರ್ಕೀವ್​ನಿಂದ ಪೋಲ್ಯಾಂಡ್ ಗಡಿಗೆ ಬಂದೆವು. ರಷ್ಯಾ ಯುದ್ಧ ಸಾರುತ್ತಿದ್ದಂತೆ ಮೆಟ್ರೋ ಸ್ಟೇಷನ್​ನಲ್ಲಿರುವ ಬಂಕರ್​ಗೆ ಬಂದು 2 ದಿನ ಕಳೆದೆವು. ನಂತರ 8 ದಿನ ಬಂಕರ್​ನಲ್ಲಿ ವನವಾಸ ಅನುಭವಿಸಿದ್ದೇವೆ. ಭಾರತೀಯ ರಾಯಭಾರಿ ಕರೆ ಬರುತ್ತಿದ್ದಂತೆ ರೈಲಿನಲ್ಲಿ ನಿಂತು ಪ್ರಯಾಣ ಮಾಡಿ, ಸುಸ್ತಾದ ಅವಸ್ಥೆಯಲ್ಲಿಯೇ 8 ಕಿ.ಮಿ ನಡೆದು ಬಾರ್ಡರ್ ತಲುಪಿದ್ದೇನೆ ಎಂದು ಅಲ್ಲಿನ ಭೀಕರತೆಯನ್ನು ವಿವರಿಸಿದರು.

ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಗಡಿಗೆ ಬರುವವರೆಗೆ ನಮಗಾಗಿ ನಮ್ಮೋರು ಅನ್ನೋರು ಯಾರೂ ಇರಲಿಲ್ಲ. ಭಾರತೀಯ ರಾಯಭಾರಿ ಅಥವಾ ಮತ್ಯಾರು ಒಳಪ್ರವೇಶ ಮಾಡದಂತಹ ಕಠಿಣ ಪರಿಸ್ಥಿತಿ ಇತ್ತು. ನಾವೇ ಸ್ವಂತ ರಿಸ್ಕ್ ಮೇಲೆ ಪೋಲ್ಯಾಂಡ್ ಗಡಿಗೆ ಬಂದು ತಲುಪಿದೆವು. ಒಂದೊತ್ತಿನ ಊಟಕ್ಕೂ ಪರದಾಡಿದ್ದೇವೆ ಎಂದರು.

ಇದನ್ನೂ ಓದಿ:ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದ ನವೀನ್​: ಘಟನೆ ವಿವರಿಸಿದ ತಮಿಳುನಾಡು ವಿದ್ಯಾರ್ಥಿನಿ

Last Updated : Mar 7, 2022, 11:01 PM IST

ABOUT THE AUTHOR

...view details