ಕರ್ನಾಟಕ

karnataka

ETV Bharat / city

ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು - Kalaburagi murder news

ಕಳೆದ ರಾತ್ರಿ ಕಲಬುರಗಿ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಕುಖ್ಯಾತ ಮನೆಗಳ್ಳನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

kalaburagi
ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು

By

Published : Jul 27, 2021, 10:41 AM IST

ಕಲಬುರಗಿ:ಕುಖ್ಯಾತ ಮನೆಗಳ್ಳನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು

ಮಹೇಶ್ ಚಿಡರಗುಂಪಿ ಅಲಿಯಾಸ್ ಮಹ್ಯಾ (38) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ನಗರದ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಈತನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಮಹ್ಯಾನಿಗೆ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ಈತ ನಗರದಲ್ಲಿ ಹಾಡಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸಿಮನಾಗಿದ್ದ. ಅಲ್ಲದೇ, ಈತನಿಗೆ ಜೈಲೇ ಮನೆಯಾಗಿತ್ತು. ಕಳೆದ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಮಹ್ಯಾ, ಮನೆಗೆ ಕೂಡ ಹೋಗಿರಲಿಲ್ಲ.

ಈತನ ಮೇಲೆ ಕಲಬುರಗಿ ನಗರದ ಬಹುತೇಕ ಎಲ್ಲ ಠಾಣೆಗಳಲ್ಲೂ ಕಳ್ಳತನದ ಕೇಸ್ ದಾಖಲಾಗಿವೆ. ಮಹೇಶ್ ಕೊಲೆಗೆ ಕಾರಣ, ಕೊಲೆಗಾರರು ಯಾರು ಎನ್ನುವುದು ಇನ್ನೂ ನಿಗೂಢವಾಗಿದೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು 'ಕಾಫಿ': ವರದಿ ಬಿಚ್ಚಿಟ್ಟ ಶಾಕಿಂಗ್ ಸತ್ಯ!

ABOUT THE AUTHOR

...view details