ಕಲಬುರಗಿ:ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯ ತೆಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ. ಅಫಜಲಪುರ ತಾಲೂಕಿನ ಭಾಸಗಿ ಗ್ರಾಮದ ನಿವಾಸಿ ನಾಗಪ್ಪ ರುದ್ನೋಡಗಿ (38) ಎಂಬಾತನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ದೇವಸ್ಥಾನದ ಯಾತ್ರಿಕ ನಿವಾಸದ ಮುಂದೆಯೇ ವ್ಯಕ್ತಿಯ ಬರ್ಬರ ಹತ್ಯೆ - ಯಾತ್ರಿಕ ನಿವಾಸ ಮುಂದೆ ಕೊಲೆ
ಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದೆ. ಸ್ಥಳದಲ್ಲಿ ಕೊಲೆಯಾದ ನಾಗಪ್ಪನ ಸ್ನೇಹಿತನಿಗೆ ಬೈಕ್ ಪತ್ತೆಯಾಗಿದೆ. ಹೀಗಾಗಿ ನಾಗಪ್ಪನನ್ನು ಕೊಲೆ ಮಾಡಿ ಆತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತ ನಾಗಪ್ಪನಿಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ. ಸುಮಾರು ವರ್ಷಗಳ ಹಿಂದೆ ಮೊದಲನೇ ಪತ್ನಿಯನ್ನು ಬಿಟ್ಟು ಎರಡನೇ ಪತ್ನಿಯೊಂದಿಗೆ ನಾಗಪ್ಪ ವಾಸವಿದ್ದಾನೆ. ಇತ್ತೀಚಿಗೆ ತವರು ಮನೆಗೆ ತೆರಳಿದ್ದ ಎರಡನೇ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿ ಬರುವುದಾಗಿ ಮನೆಯವರಿಗೆ ಹೇಳಿ ಮಹಿಬೂಬ್ ಎಂಬಾತನ ಬೈಕ್ ಮೇಲೆ ಇಬ್ಬರು ತೆರಳಿದ್ದರು.
ಆದರೆ, ಮಾರ್ಗ ಮಧ್ಯೆ ಬರುವ ಮಣ್ಣೂರ ದೇವಸ್ಥಾನದ ಯಾತ್ರಿಕ ನಿವಾಸದ ಮುಂದೆ ನಾಗಪ್ಪನ ಕೊಲೆಯಾಗಿದೆ. ಸ್ಥಳದಲ್ಲಿ ಮಹಿಬೂಬ್ಗೆ ಸೇರಿದ ಬೈಕ್ ಕೂಡ ಪತ್ತೆಯಾಗಿದೆ. ಹೀಗಾಗಿ ನಾಗಪ್ಪನನ್ನು ಕೊಲೆ ಮಾಡಿ ಮಹಿಬೂಬ್ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.