ಕಲಬುರಗಿ:ಮಳೆಗಾಲ ಆರಂಭವಾದರೂ ಮಳೆ ಬಾರದೆ ರೈತರನ್ನು ಸಂಕಟಕ್ಕೆ ದೂಡಿದೆ. ಇದರಿಂದ ಕಂಗೆಟ್ಟ ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್, ಮಳೆಗಾಗಿ ಚಿತ್ತಾಪುರ ತಾಲೂಕಿನ ಒಂಬತ್ತು ದೇವಾಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ.
ಕೃಪೆ ತೋರದ ವರುಣ... ಮಳೆಗಾಗಿ 9 ದೇವಾಲಯ ಸುತ್ತಿದ ರೈತ - undefined
ಮಳೆಗಾಲ ಆರಂಭವಾದರೂ ಮಳೆ ಬಾರದೆ ರೈತರನ್ನು ಸಂಕಟಕ್ಕೆ ದೂಡಿದ್ದರಿಂದ ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್ ಎಂಬವರು ಮಳೆಗಾಗಿ ಚಿತ್ತಾಪುರ ತಾಲೂಕಿನ ಒಂಬತ್ತು ದೇವಾಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡಿ ಹರಕೆ ತೀರಿಸಿದ್ದಾರೆ.
ನಾಲವಾರದ ಕೋರಿಸಿದ್ಧೇಶ್ವರ, ಕೊಂಚುರಿನ ಹನುಮಾನ ಮಂದಿರ, ಬಳವಡಗಿ ಗ್ರಾಮದ ಯಲಮ್ಮ, ಹಲಕರ್ಟಿ ಗ್ರಾಮದ ವೀರಭದ್ರೇಶ್ವರ, ಲಾಡ್ಲಾಪುರದ ಹಾಜಿ ಸರ್ವರ್ ಬೆಟ್ಟ, ಅಳ್ಳೋಳಿಯ ಅಯ್ಯಪ್ಪಯ್ಯ, ದಂಡಗುಂಡ ಬಸವೇಶ್ವರ, ಯಾದಗಿರಿಯ ಮೈಲಾಪುರದ ಮೈಲಾರಲಿಂಗ ದೇವಸ್ಥಾನಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಕ್ತಿ ಸರ್ಮಪಿಸಿದ್ದಾರೆ.
ಶನಿವಾರ ಆರಂಭಗೊಂಡ ಈ ಯಾತ್ರೆ ನಿನ್ನೆ ಸಂಜೆ (ಭಾನುವಾರ) ದಂಡಗುಂಡ ಬಸವೇಶ್ವರ ದೇವಸ್ಥಾನದದಲ್ಲಿ ಅಂತ್ಯಗೊಂಡಿತು. ಮಳೆರಾಯನ ಕೃಪೆ ಕೋರಿ ಎರಡು ದಿನ ಒಂಬತ್ತು ಕ್ಷೇತ್ರ ಸಂಚರಿಸಿ ಹರಕೆ ಅರ್ಪಿಸಿದ ರೈತ ರುದ್ರಗೌಡ ಪಾಟೀಲ್ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿದರು.