ಕಲಬುರಗಿ: ಶಾಲಾ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಆಟವಾಡಲು ಹೋಗಿದ್ದ ಬಾಲಕ ಕಾಲುಜಾರಿ ಕೆರೆಗೆ ಬಿದ್ದು ನೀರುಪಾಲಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಹಣ್ಣಿಕೇರಾ ಭೋಜು ನಾಯಕ ತಾಂಡಾದಲ್ಲಿ ನಡೆದಿದೆ.
ಗೆಳೆಯರ ಜೊತೆ ಆಟವಾಡಲು ಹೋದ ಬಾಲಕ ನೀರುಪಾಲು
ಸ್ನೇಹಿತರ ಜೊತೆ ಆಟವಾಡಲು ಹೋಗಿದ್ದಾಗ ಕಾಲುಜಾರಿ ಕೆರೆಗೆ ಬಿದ್ದ ಬಾಲಕ ನೀರುಪಾಲು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಅವಘಡ.
ಗೆಳೆಯರ ಜೊತೆ ಆಡವಾಡಲು ಹೋದ ಬಾಲಕ ನೀರುಪಾಲು
ಭೋಜು ನಾಯಕ ತಾಂಡಾದ ದೀಪಕ್ ಹೇಮ್ಲಾ(13) ಮೃತ ಬಾಲಕ ಎಂದು ಗುರುತಿಸಲಾಗಿದೆ. ಗಾಂಧಿ ಜಯಂತಿ ಪ್ರಯುಕ್ತ ಶಾಲಾ ರಜೆ ಹಿನ್ನೆಲೆ ದೀಪಕ್ ಗೆಳೆಯರ ಜೊತೆ ಆಟವಾಡಲು ಕೆರೆ ಬಳಿ ಹೋಗಿದ್ದ. ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನ ಸಾವಿನ ವಿಷಯ ತಿಳಿದು ಕೆರೆ ಹತ್ತಿರ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.