ಕರ್ನಾಟಕ

karnataka

ETV Bharat / city

ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ 500 ಬೆಡ್ ವ್ಯವಸ್ಥೆ ಮಾಡಲಾಗಿದೆ: ಸಚಿವ ನಿರಾಣಿ - ಸಚಿವ ಮುರುಗೇಶ ನಿರಾಣಿ

ಆಕ್ಸಿಜನ್ ಕೊರತೆ ಇಲ್ಲ, ಬೇರೆ ಕಡೆಯಿಂದ ತರೋದಕ್ಕೆ ನಮಗೆ ತೊಂದರೆ ಆಗ್ತಿದೆ. ಸರ್ಕಾರದ ಖೋಟಾ ಹೊರತಾಗಿ ಬೇರೆ ಕಡೆಯಿಂದ ಎರಡು ಟ್ಯಾಂಕ್ ಆಕ್ಸಿಜನ್ ತರಲಾಗ್ತಿದೆ. ನಾಳೆ ಬೆಳಗ್ಗೆ ಒಳಗೆ ಕಲಬುರಗಿ ಜಿಲ್ಲೆಗೆ ಒಂದು ಟ್ಯಾಂಕರ್ ಆಕ್ಸಿಜನ್ ಬರುತ್ತದೆ. ಮುಂದಿನ ವಾರಕ್ಕೆ ನಮಗೆ 30 ಕೆಎಲ್ ಆಕ್ಸಿಜನ್ ಬೇಕಾಗಬಹುದು ಆ ನಿಟ್ಟಿನಲ್ಲಿ ಗಮನ ವಹಿಸಿ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ನಿರಾಣಿ
ಸಚಿವ ನಿರಾಣಿ

By

Published : May 8, 2021, 7:40 PM IST

ಕಲಬುರಗಿ:ಜಿಲ್ಲೆಯಲ್ಲಿ 1,600 ಬೆಡ್, ಆಕ್ಸಿಜನ್ 400, ಐಸಿಯು ಬೆಡ್ 378 ಇದೆ. ಇಎಸ್ಐ ಆಸ್ಪತ್ರೆಯಲ್ಲಿ 500 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಜಿಲ್ಲೆಗೆ 200 ರೆಮ್ಡೆಸಿವಿರ್​ ಇಂಜೆಕ್ಷನ್ ಬಂದಿದೆ. ನಾಳೆ ಹೆಚ್ಚಿನ ಇಂಜೆಕ್ಷನ್ ಕಳುಹಿಸುವಂತೆ ಡಿಸಿಎಂ ಅಶ್ವತ್ಥ ನಾರಾಯಣ್ ಅವರ ಗಮನಕ್ಕೆ ತರಲಾಗಿದೆ ಎಂದರು.

ಆಕ್ಸಿಜನ್ ಕೊರತೆ ಇಲ್ಲ, ಬೇರೆ ಕಡೆಯಿಂದ ತರೋದಕ್ಕೆ ನಮಗೆ ತೊಂದರೆ ಆಗ್ತಿದೆ. ಸರ್ಕಾರದ ಖೋಟಾ ಹೊರತಾಗಿ ಬೇರೆ ಕಡೆಯಿಂದ ಎರಡು ಟ್ಯಾಂಕ್ ಆಕ್ಸಿಜನ್ ತರಲಾಗ್ತಿದೆ. ನಾಳೆ ಬೆಳಗ್ಗೆ ಒಳಗೆ ಕಲಬುರಗಿ ಜಿಲ್ಲೆಗೆ ಒಂದು ಟ್ಯಾಂಕರ್ ಆಕ್ಸಿಜನ್ ಬರುತ್ತದೆ. ಮುಂದಿನ ವಾರಕ್ಕೆ ನಮಗೆ 30 ಕೆಎಲ್ ಆಕ್ಸಿಜನ್ ಬೇಕಾಗಬಹುದು ಆ ನಿಟ್ಟಿನಲ್ಲಿ ಗಮನ ವಹಿಸಿ ಆಕ್ಸಿಜನ್ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ

ಸಿಲಿಂಡರ್ ಖರೀದಿಗೆ ಹಣ ನೀಡಲಾಗಿದೆ, ಆದ್ರೆ ಮಹಾರಾಷ್ಟ್ರದವರು ಫೋನ್ ತೆಗೆದುಕೊಳ್ಳತ್ತಿಲ್ಲ. 100 ಆಕ್ಸಿಜನ್ ಕಾನ್ಸನ್​​ಟ್ರೇಟರ್ ಸೋಮವಾರ ಕಲಬುರಗಿಗೆ ಬರುತ್ತೆ. ಬೋವಿಂಗ್ ವತಿಯಿಂದ 250 ಬೆಡ್ ಕಲಬುರಗಿಗೆ ಮಂಜೂರು ಆಗಿದೆ. ನಾಳೆಯಿಂದ ಕೆಲಸ ಆರಂಭವಾಗಲಿದ್ದು, ಮುಂದಿನ ಆರು ತಿಂಗಳ ಒಳಗೆ ಕಂಪ್ಲೀಟ್ ಆಗುತ್ತದೆ. ಅಕ್ಕ ಪಕ್ಕದ ರಾಜ್ಯದಲ್ಲಿ ಲಾಕ್​ಡೌನ್ ಸಂದರ್ಭದಲ್ಲಿ ಬಡವರಿಗೆ ಏನೆಲ್ಲಾ ವ್ಯವಸ್ಥೆ ಕಲ್ಪಿಸಿದ್ದಾರೆ ಅನ್ನೋದನ್ನ ನೋಡಿ ಮುಂದಿನ ದಿನಗಳಲ್ಲಿ ಸರ್ಕಾರ ಇಲ್ಲಿಯೂ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.

ABOUT THE AUTHOR

...view details