ಕರ್ನಾಟಕ

karnataka

ETV Bharat / city

ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳ ಬಂಧನ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ..

arrest
arrest

By

Published : Feb 3, 2021, 7:08 PM IST

ಕಲಬುರಗಿ: ಮುಸುಕು ಧರಿಸಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಖ್ಯಾತ ರೌಡಿಶೀಟರ್ ಕಿಟ್ಯಾ ಅಲಿಯಾಸ್ ಕೃಷ್ಣಾ ಹಾಗೂ ಆತನ ಸಹಚರರಾದ ಅನಿಲ ಸುಣಗಾರ್, ಅನಿಲ್ ಭಜಂತ್ರಿ ಅಲಿಯಾಸ್ ಡಾಬರ್ ಅನಿಲ, ರೇವಣಸಿದ್ದ ಅಲಿಯಾಸ್ ಕುಳ್ಯಸಿದ್ದ್ಯ, ರವಿ ಪೂಜಾರಿ ಬಂಧಿತರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇನ್ನು, ಬಂಧಿತರಿಂದ ಮಾರಕಾಸ್ತ್ರಗಳು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details