ಕರ್ನಾಟಕ

karnataka

ETV Bharat / city

ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಲ್ಲೆ ವಿಚಾರ: ಕಲಬುರಗಿ ಚೌಕ್ ಠಾಣೆಯ 4 ಕಾನ್ಸ್​​ಟೇಬಲ್​ಗಳು ಅಮಾನತು! - kalaburagi police constables suspended

ಅಕ್ಟೋಬರ್ 24ರಂದು ಸೇಡಂ ರಸ್ತೆಯ ಟೋಲ್ ಗೇಟ್ ಬಳಿಯಿಂದ ಅಫಜಲಪುರ ನಿವಾಸಿ ದುಂಡಪ್ಪ ಜಮಾದಾರ್ ಎಂಬಾತರನ್ನು ಠಾಣೆಗೆ ಕರೆತಂದು ಪೊಲೀಸ್​ ಕಾನ್ಸ್​​ಟೇಬಲ್​ಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬ ಆರೋಪ ಸಾಬೀತಾದ ಹಿನ್ನೆಲೆ ಚೌಕ್ ಠಾಣೆಯ 4 ಪೊಲೀಸ್ ಕಾನ್ಸ್​​ಟೇಬಲ್​ಗಳನ್ನು ಅಮಾನತುಗೊಳಿಸಲಾಗಿದೆ.

4 constables of kalaburagi chouk police station are suspended
ಕಲಬುರಗಿ ಚೌಕ್ ಠಾಣೆಯ 4 ಕಾನ್ಸ್​​ಟೇಬಲ್​ಗಳು ಅಮಾನತು

By

Published : Dec 2, 2021, 2:48 PM IST

ಕಲಬುರಗಿ: ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆತಂದು ಹಲ್ಲೆ ಮಾಡಿರುವ ಹಿನ್ನೆಲೆ ಚೌಕ್ ಠಾಣೆಯ 4 ಪೊಲೀಸ್ ಕಾನ್ಸ್​​ಟೇಬಲ್​ಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ ಆದೇಶ ಹೊರಡಿಸಿದ್ದಾರೆ.

ಚೌಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​​ ಕೇಶುರಾವ್​, ಕಾನ್ಸ್​​ಟೇಬಲ್​​ಗಳಾದ ರಾಜಕುಮಾರ್, ಉಮೇಶ ಹಾಗೂ ಅಶೋಕ್​ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಕಲಬುರಗಿ ಚೌಕ್ ಠಾಣೆಯ 4 ಕಾನ್ಸ್​​ಟೇಬಲ್​ಗಳು ಅಮಾನತು

ಕಳೆದ ಅಕ್ಟೋಬರ್ 24ರಂದು ಸೇಡಂ ರಸ್ತೆಯ ಟೋಲ್ ಗೇಟ್ ಬಳಿಯಿಂದ ಅಫಜಲಪುರ ನಿವಾಸಿ ದುಂಡಪ್ಪ ಜಮಾದಾರ್ ಎಂಬುವರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಅಂತ ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ:ಡಿಕೆಶಿ ಆಪ್ತ ಬಣದಲ್ಲಿರುವವರು ರೌಡಿ ಅಥವಾ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ ವ್ಯಂಗ್ಯ

ಈ ಕುರಿತು ದಕ್ಷಿಣ ವಲಯ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಹಲ್ಲೆ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಚೌಕ್‌ ಠಾಣೆಯ ಇನ್ಸ್​​ಪೆಕ್ಟರ್ ಎಸ್.ಆರ್ ನಾಯಕ್ ಅವರ ಮುಂಬಡ್ತಿ ಮುಂದೂಡಿ (ಸೆಕ್ಷನ್​ 7ರ ಅನ್ವಯ), 4 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ABOUT THE AUTHOR

...view details