ಕಲಬುರಗಿ: ಚಿಂಚೋಳಿ (ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ನಡೆಯುವ ಉಪ ಚುನಾವಣೆಗೆ ಇಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿತ್ತು. ಒಟ್ಟು 10 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಸ್ವೀಕೃತವಾದ 27 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಎಸ್.ಜಿ. ತಿಳಿಸಿದ್ದಾರೆ.
ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ:
01.ಅವಿನಾಶ್ ಜಾಧವ್- ಭಾರತೀಯ ಜನತಾ ಪಕ್ಷ
02.ಗೌತಮ ಬಕ್ಕಪ್ಪ - ಬಹುಜನ ಸಮಾಜ ಪಕ್ಷ
03.ಸುಭಾಷ್ ವಿ. ರಾಠೋಡ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
04.ದೀಪಕ್ ಗಂಗಾರಾಮ- ಹಿಂದೂಸ್ತಾನ ಜನತಾ ಪಾರ್ಟಿ
05.ಮಾರುತಿ - ಬಹುಜನ ಮುಕ್ತಿ ಪಾರ್ಟಿ
06.ವಿಜಯ ಗೋವಿಂದ ಜಾಧವ್ - ಸರ್ವ ಜನತಾ ಪಾರ್ಟಿ
07.ಕೆ. ದೀಪಾ ಗಣಪತರಾವ್ - ಪಕ್ಷೇತರ