ಕಲಬುರಗಿ: ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹಜರತ್ ಗಾಯಬ್ ಪೀರ್ ಸಾಹೇಬ್ ಜಾತ್ರೆಯನ್ನು (ಉರೂಸ್) ಸರಳವಾಗಿ ನಡೆಸಲಾಗಿತ್ತು. ಆದರೆ, ಈ ವರ್ಷ ಸರ್ವ ಧರ್ಮದವರೂ ಸೇರಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜಾತಿ ಬೇಧ ಮರೆತು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಗೆ ಬನ್ನೂರು ಹಾಗೂ ಅಕ್ಕಪಕ್ಕದ ಊರಿನ ಜನರು ಆಗಮಿಸಿದ್ದರು.
ಕಲಬುರಗಿ: ಭಾವೈಕ್ಯತೆಗೆ ಸಾಕ್ಷಿಯಾದ ಹಜರತ್ ಗಾಯಿಬ್ ಪೀರ್‌ಸಾಹೇಬ್ ಜಾತ್ರೆ - A special festival in kalburgi
ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ತಾಲೂಕಿನ ಬನ್ನೂರು ಹಜರತ್ ಗಾಯಿಬ್ ಪೀರ್ ಸಾಹೇಬ್ 234ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಹಜರತ್ ಗಾಯಿಬ್ ಪೀರ್ ಸಾಹೇಬ್ ರ 234ನೇ ಜಾತ್ರಾ ಮಹೋತ್ಸವ
ಭಕ್ತರು ನೈವೇದ್ಯ, ತೆಂಗು, ಗಾಲಿಬ್, ಹೂವು ಸಮರ್ಪಿಸಿ ಭಕ್ತಿ ಮೆರೆದರು. ಹಳ್ಳಿ ಸೊಗಡಿನ ಗಾಗಿಯಪದಗಳು, ಜಂಗಿಕುಸ್ತಿ ಜಾತ್ರೆ ಸಂಭ್ರಮವನ್ನು ಇಮ್ಮಡಿಗೊಳಿಸಿತು. ವಿವಿಧೆಡೆಯಿಂದ ಆಗಮಿಸಿದ ಕುಸ್ತಿಪಟುಗಳು ಕುಸ್ತಿಯಲ್ಲಿ ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದ ಕಾಶಿರಾಮ ಜವಳಗಿ ಅವರಿಗೆ ನಗದು ಬಹುಮಾನ ಮತ್ತು 5 ತೊಲ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ:ನಿಂದಿಸಿದ ಯುವಕನಿಗೆ ಬುದ್ಧಿವಾದ ಹೇಳಿದೆ ಅಷ್ಟೇ: ಶಾಸಕ ವೆಂಕಟರಮಣಪ್ಪ ಸ್ಪಷ್ಟನೆ