ಕಲಬುರಗಿ: ತಾಯಿಯಿಂದ ಸ್ಫೂರ್ತಿ ಪಡೆದ ವಿದ್ಯಾರ್ಥಿನಿಯೊಬ್ಬಳು ಹಾರ್ಮೋನಿಯಂ, ತಬಲಾ, ಗಾಯನ, ಕರಾಟೆ, ಭರತನಾಟ್ಯ ಸೇರಿದಂತೆ 60 ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ಪರಿಣತಿ ಹೊಂದುವ ಮೂಲಕ ಗಮನ ಸೆಳೆದಿದ್ದಾಳೆ.
ಕಲಬುರಗಿಯ 17 ವರ್ಷದ ಆಕಾಂಶ ಪುರಾಣಿಕ್ ಎಂಬ ವಿದ್ಯಾರ್ಥಿನಿ ಹಾರ್ಮೋನಿಯಂ, ತಬಲಾ, ಸಿತಾರ್, ಗಿಟಾರ್ ಸೇರಿದಂತೆ ಮುಂತಾದ ಸಂಗೀತಾ ವಾದ್ಯಗಳನ್ನು ಸಲೀಸಾಗಿ ನುಡಿಸುತ್ತಾಳೆ. ಅಷ್ಟೇ ಅಲ್ಲದೇ, ಗಾಯನ, ಕರಾಟೆ, ಭರತನಾಟ್ಯ ಸೇರಿದಂತೆ 60ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, 5 ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲಳು.