ಕಲಬುರಗಿ: ಚಾಲಾಕಿತನದಿಂದ ನಕಲು ಮಾಡಿ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಬರೆಯಲು ಮುಂದಾಗಿದ್ದ ಗ್ಯಾಂಗ್ವೊಂದನ್ನು ಬಂಧಿಸುವಲ್ಲಿ ಸಿಇಎನ್ ಪೊಲೀಸರ ತಂಡ ಯಶಸ್ವಿಯಾಗಿದೆ. ಮೂವರು ಅಭ್ಯರ್ಥಿಗಳು ಸೇರಿ ಒಟ್ಟು 11 ಜನರನ್ನು ಬಂಧಿಸಲಾಗಿದೆ.
ನಗರ ಪೊಲೀಸ್ ಕಮಿಷನರ್ ವೈ.ಎಸ್ ರವಿ ಕುಮಾರ್ ಅಭ್ಯರ್ಥಿಗಳಾದ ರಾಜಕುಮಾರ್, ಪೀರಪ್ಪ, ಮಾಳಪ್ಪ ಸೇರಿ ಇತರ 11 ಮಂದಿ ಬಂಧಿತ ಆರೋಪಿಗಳು. ನಿನ್ನೆ (ಭಾನುವಾರ) ನಡೆದ ಪೊಲೀಸ್ ಪರೀಕ್ಷೆಯಲ್ಲಿ ನಕಲು ಮಾಡಲು ಪ್ಲಾನ್ ಮಾಡಿದ್ದ ವೇಳೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲಗೆ ಬಿದ್ದಿದ್ದಾರೆ.
ಹೇಗಿತ್ತು ಪ್ಲಾನ್?
ಬನಿಯನ್ ಒಳಗೆ ಡಿವೈಸ್ ಅಳವಡಿಸಿ ಪರೀಕ್ಷೆಗೆ ಬರೆದು ಪಾಸ್ ಆಗಲು ಈ ಗ್ಯಾಂಗ್ ಮಾಡಿರುವ ಪ್ಲಾನ್ ಮಾಡಿದ್ದರು. ಬ್ಲೂಟೂತ್ ಮೂಲಕ ಪೊಲೀಸ್ ಪರೀಕ್ಷೆಯ ಉತ್ತರ ಬರೆಯಲು ಪ್ಲಾನ್ ಸಿದ್ದವಾಗಿತ್ತು. ಬನಿಯನ್ ನಲ್ಲಿ ಡಿವೈಸ್ ಅಳವಡಿಸಿ ಮೈಕ್ರೋ ಫೋನ್ ಹಾಗು ಬ್ಲ್ಯೂಟೂತ್ ಬಳಸಿ ಉತ್ತರ ಬರೆಯಲು ಮುಂದಾಗಿದ್ರು. ಇದಕ್ಕಾಗಿ ನಗರದ ಪ್ರೀತಂ ಲಾಡ್ಜ್ನಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಿದ್ದಾರೆ.
ಯಾವುದೇ ತೊಂದರೆಯಿಲ್ಲದೆ ಸಲೀಸಾಗಿ ಪರೀಕ್ಷೆ ಬರೆದು ಪಾಸಾಗಲು ಈ ಗ್ಯಾಂಗ್ ಒಬ್ಬ ಅಭ್ಯರ್ಥಿಯ ಡಿವೈಸ್ ಬನಿಯನ್‌ಗೆ 5 ಲಕ್ಷ ರೂ. ನಿಗದಿ ಮಾಡಿದ್ದರು ಎನ್ನಲಾಗ್ತಿದೆ.