ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಪೊಲೀಸ್​ ಠಾಣೆಗೆ ಪೂಜೆ ಸಲ್ಲಿಸಿ, ಕೊರೊನಾ ವಾರಿಯರ್ಸ್​ಗೆ ಗೌರವ ಸೂಚನೆ - worshiped

ನಗರದ ಬಮ್ಮಾಪುರ ಓಣಿಯ ಯುವಕರು ಘಂಟಿಕೇರಿ ಪೋಲಿಸ್ ಠಾಣೆಗೆ ತೆರಳಿ ದೀಪ ಬೆಳಗಿ, ತೆಂಗಿನಕಾಯಿ ಒಡೆಯುವ ಮುಖಾಂತರ ವಿಶಿಷ್ಟವಾಗಿ ಕೊರೊನಾ ವಾರಿಯರ್ಸ್​ಗಳಿ ಗೌರವ ಸೂಚಿಸಿದ್ದಾರೆ.

Ghantikeri police station
ಪೊಲೀಸ್​ ಠಾಣೆಗೆ ಪೂಜೆ

By

Published : May 3, 2020, 2:28 PM IST

ಹುಬ್ಬಳ್ಳಿ: ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್​ ಸಿಬ್ಬಂದಿಗೆ ಗೌರವ ಸೂಚಿಸುವ ಸಲುವಾಗಿ ನಗರದ ಬಮ್ಮಾಪುರ ಓಣಿಯ ಯುವಕರು, ಹಿರಿಯರೆಲ್ಲರು ಸೇರಿಕೊಂಡು ಘಂಟಿಕೇರಿ ಪೊಲೀಸ್​ ಠಾಣೆಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ.

ಪೊಲೀಸ್​ ಠಾಣೆಗೆ ಪೂಜೆ

ನಗರದ ಹೃದಯ ಭಾಗದಲ್ಲಿರುವ ಘಂಟಿಕೇರಿ ಪೋಲಿಸ್ ಠಾಣೆಗೆ ತೆರಳಿ ದೀಪ ಬೆಳಗಿ, ತೆಂಗಿನಕಾಯಿ ಒಡೆಯುವ ಮುಖಾಂತರ ವಿಶಿಷ್ಟವಾಗಿ ಕೊರೊನಾ ವಾರಿಯರ್ಸ್​ಗಳಿ ಗೌರವ ಸೂಚಿಸಿದ್ದಾರೆ.

ಮಂಜುನಾಥ ಯಂಟ್ರುವಿ, ವಿನಾಯಕ ಹಿಂಗನಕರ, ಕಾಶಿನಾಥ ಸೂರ್ಯವಂಶಿ ಸೇರಿದಂತೆ ಬಮ್ಮಾಪೂರ ಓಣಿಯ ಜನರ ಪರವಾಗಿ ಪೋಲಿಸ್ ಠಾಣೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು.

ಕೊರೊನಾ ವೈರಸ್ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಸುವುದರ ಜೊತೆಗೆ ಮನೆಯಿಂದ ಯಾರು ಹೊರಬರದಂತೆ ಪೋಲಿಸ್ ಸಿಬ್ಬಂದಿ ಅವಿರಿತ ಶ್ರಮ ವಹಿಸಿದ್ದಾರೆ. ಜೊತೆಗೆ ಎಲ್ಲ ದೇವಸ್ಥಾನಗಳು ಬಂದ್ ಇರುವುದರಿಂದ, ಪೊಲೀಸ್​ ಠಾಣೆಯೆ ನಮಗೆ ದೇವಸ್ಥಾನವಿದ್ದಂತೆ ಹೀಗಾಗಿ ನಾವು ಇವತ್ತು ಪೋಲಿಸ್ ಠಾಣೆಗೆ ಬಂದು ವಿಶೇಷ ಪೂಜೆ ಸಲ್ಲಿಸಿರುವುದಾಗಿ ಮಂಜುನಾಥ ಯಂಟ್ರುವಿ ಅವರು ತಿಳಿಸಿದ್ದಾರೆ.

ABOUT THE AUTHOR

...view details