ಹುಬ್ಬಳ್ಳಿ:ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿದ ಯುವಕನೊಬ್ಬ ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಆಕೆಯ ಫೋಟೋವೊಂದನ್ನು ಎಡಿಟ್ ಮಾಡಿ ವಾಟ್ಸ್ಆ್ಯಪ್ ಸ್ಟೇಟಸ್‌ಗೆ ಇಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಯುವತಿಯ ನಗ್ನ ಫೋಟೋ ಹರಿಯಬಿಟ್ಟ ಆಸಾಮಿ - ಹುಬ್ಬಳ್ಳಿಯಲ್ಲಿ ವಾಟ್ಸಾಪ್ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ,
ವಾಟ್ಸ್ಆ್ಯಪ್ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ ಹಾಕಿ ವಿಕೃತಿ ಮೆರೆದ ಆಸಾಮಿ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ವಿರುದ್ಧ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸ್ಆ್ಯಪ್ ನಂಬರ್ ಪಡೆದಿದ್ದ.
ಯುವತಿ ಜೊತೆ ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಯುವತಿಯ ಜೊತೆ ನಗ್ನ ವಿಡಿಯೋ ಕಾಲ್ ಮಾಡಿದ್ದಲ್ಲದೇ ಆ ಕಾಲ್ನ ರೆಕಾರ್ಡ್ ಮಾಡಿಕೊಂಡಿದ್ದ. ನ. 11ರಂದು ಆಕೆಯ ನಗ್ನ ಫೋಟೋವನ್ನು ಎಡಿಟ್ ಮಾಡಿ ಸ್ಟೇಟಸ್‌ಗೆ ಹಾಕಿ ವಿಕೃತಿ ಮೆರೆದಿದ್ದ. ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ತನ್ನ ನಗ್ನ ಫೋಟೋಗಳನ್ನು ನೋಡಿ ಈ ಘಟನೆ ಬಗ್ಗೆ ಯುವತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.