ಕರ್ನಾಟಕ

karnataka

ETV Bharat / city

ಜಗಳ ಬಿಡಿಸಲು ಬಂದವನಿಗೆ ಚಾಕು ಇರಿತ: ಹಳೇ ಹುಬ್ಬಳ್ಳಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲು - Old Hubli police station

ಜಗಳ ಬಿಡಿಸಲು ಹೋದ ಸ್ನೇಹಿತನಿಗೆ ಚಾಕುವಿನಿಂದ ಇರಿದು ಇಬ್ಬರು ಯುವಕರು ಪರಾರಿಯಾಗಿದೆ. ಈ ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Young man stabbed by two men in Old Hubli
Young man stabbed by two men in Old Hubli

By

Published : Sep 14, 2021, 2:12 PM IST

ಹುಬ್ಬಳ್ಳಿ: ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಸ್ನೇಹಿತನಿಗೆ ಚಾಕುವಿನಿಂದ ಇರಿದು ಇಬ್ಬರು ಯುವಕರು ಪರಾರಿಯಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಆನಂದನಗರ ರಸ್ತೆಯ ಅರ್ಜುನ ನಗರದಲ್ಲಿ ನಡೆದಿದೆ.

ಆನಂದ ನಗರದ ಇರ್ಫಾನ್ ಸೊಲ್ಲಾಪುರ ಚಾಕು ಇರಿತಕ್ಕೀಡಾದ ಯುವಕ. ಇಂದ್ರಪ್ರಸ್ಥ ನಗರದ ಜಮೀರ್​ ಅಹ್ಮದ್​ ಲಕ್ಕುಂಡಿ ಹಾಗೂ ಶಿವಪುತ್ರ ನಗರದ ಇಸ್ಮಾಯಿಲ್ ಧಾರವಾಡ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ರೈಲಿನಲ್ಲಿ ಪತ್ತೆಯಾದ ಬ್ಯಾಗ್​ನಲ್ಲಿ ಲಕ್ಷ ಮೌಲ್ಯದ ಗಾಂಜಾ!

ಘಟನೆ ಏನು?

ಸೆ. 7 ರಂದು ದೀಪಕ್​ ಜಮೀರ್ ಮತ್ತು ಇಸ್ಮಾಯಿಲ್ ನಡುವೆ ಗಲಾಟೆ ನಡೆದಿತ್ತು. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋಣ ಬಾ ಎಂದು ದೀಪಕ್​ನನ್ನು ಇಸ್ಮಾಯಿಲ್ ಮತ್ತು ಆತನ ಸ್ನೇಹಿತ ಜಮೀರ್​ ಅರ್ಜುನ ನಗರದ ಖುಲ್ಲಾ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತ್ತೆ ಜಗಳ ತೆಗೆದಿದ್ದಾರೆ.

ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ದೀಪಕ್​​ನ ಗೆಳೆಯ ಇರ್ಫಾನ್‌ನ ಕೈ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಇಸ್ಮಾಯಿಲ್ ಮತ್ತು ಜಮೀರ್ ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details