ಕರ್ನಾಟಕ

karnataka

ETV Bharat / city

ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನಿಗೆ ಗುದ್ದಿದ ಜೆಸಿಬಿ: ಯುವಕ ಸಾವು - young man died in hubli

ಹುಬ್ಬಳ್ಳಿಯ ದೇಸಾಯಿ ಸರ್ಕಲ್ ಪಕ್ಕದ ಉಸುಕಿನ ಅಡ್ಡೆಯಲ್ಲಿ ಯುವಕನೋರ್ವ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಜೆಸಿಬಿ ಯಂತ್ರ ಆತನಿಗೆ ಗುದ್ದಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ಯುವಕ ಸಾವು
ಯುವಕ ಸಾವು

By

Published : Dec 10, 2020, 12:54 PM IST

Updated : Dec 10, 2020, 1:04 PM IST

ಹುಬ್ಬಳ್ಳಿ: ಯುವಕನೋರ್ವ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಜೆಸಿಬಿ ಬಂದು ಗುದ್ದಿದ್ದು, ಯುವಕ ಸಾವನ್ನಪ್ಪಿರುವ ಘಟನೆ ದೇಸಾಯಿ ಸರ್ಕಲ್ ಪಕ್ಕದ ಉಸುಕಿನ ಅಡ್ಡೆಯಲ್ಲಿ ನಡೆದಿದೆ.

ದೇವರಾಜ್ ಬಂಡಿವಡ್ಡರ (18) ಮೃತ ಯುವಕ. ಈತ ತಡರಾತ್ರಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಜೆಸಿಬಿ ಆತನಿಗೆ ಗುದ್ದಿದೆ. ಪರಿಣಾಮ ಯುವಕ ಗಂಭೀರ ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪೂರ್ವ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 10, 2020, 1:04 PM IST

ABOUT THE AUTHOR

...view details