ಹುಬ್ಬಳ್ಳಿ: ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ಮೊದಲ ದಿನದ ಯೋಗ ಶಿಬಿರ ಯಶಸ್ವಿಯಾಗಿ ನೆರವೇರಿತು.
ವಿಆರ್ಎಲ್ ಲಾಜಿಸ್ಟಿಕ್ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿಂದು ಬೆಳಿಗ್ಗೆ 5 ಗಂಟೆಗೆ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರವನ್ನು ಕೇಶ್ವಾಪುರದ ರೈಲು ಕ್ರೀಡಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೊದಲ ದಿನವಾದ ಇಂದು ಯೋಗ ಶಿಬಿರಾರ್ಥಿಗಳು ಬೆಳ್ಳಂಬೆಳಗ್ಗೆ ಸಾಗರೋಪಾದಿಯಲ್ಲಿ ಬಂದಿದ್ದು ವಿಶೇಷವಾಗಿತ್ತು. ಕೊರೆಯುವ ಚಳಯಲ್ಲಿಯೂ ಕೂಡ ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರದ ಪ್ರಯೋಜನ ಪಡೆದುಕೊಂಡರು.
ಯೋಗಾಸನದಲ್ಲಿ ಸೂರ್ಯ ನಮಸ್ಕಾರ, ಮಯೂರಾಸನ, ಹಸ್ತ ಪಾದಾಸನ, ವಜ್ರಾಸನ, ಪದ್ಮಾಸನ ಸೇರಿದಂತೆ ಯೋಗಾಸನದ ಹಲವಾರು ಭಂಗಿಗಳನ್ನು ಪ್ರದರ್ಶನ ಮಾಡಲಾಯಿತು.