ಧಾರವಾಡ:ಲೋಕಸಭಾ ಫೈಟ್ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇನ್ನೂ ಅಂತಿಮವಾಗದ ಹಿನ್ನೆಲೆಯಲ್ಲಿ, ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ಗೇಲಿ ಮಾಡಲಾರಂಭಿಸಿದ್ದಾರೆ.
ಪರೋಕ್ಷವಾಗಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಿಕೆಟ್ ಕೊಡಿ ಎಂದು ಬಿಜೆಪಿಗರು ಗೇಲಿ ಮಾಡುತ್ತಿದ್ದು, ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕ್ರೊ, ಹಾಕ್ರೋ ಎಂದು ಬಿಜೆಪಿ ಕಾರ್ಯಕರ್ತರು ಗೇಲಿ ಮಾಡುತ್ತಿದ್ದಾರೆ.
ಕ್ಯಾಂಡಿಡೇಟ್ ಹಾಕಿ, ಡಿಪಾಸಿಟ್ ಉಳಿಸಿಕೊಳ್ಳಿ. ನಮ್ಮ ಬಣ್ಣ ಪಟಾಕಿ ರೆಡಿ ಅದಾವು ಅಂತ ಗೇಲಿ ಮಾಡುತ್ತಿದ್ದಾರೆ. ಡಮ್ಮಿ ಕ್ಯಾಂಡಿಡೇಟ್ ಹಾಕಿದ್ರೆ ಜೋಷ್ ಇರಲ್ಲ. ಹುಲಿ, ಸಿಂಹ, ಚಿರತೆ ಅಂತ ಕೇಳಿ ಸಾಕಾಗಿದೆ. ಬೇಗ ಕ್ಯಾಂಡಿಡೇಟ್ ಹಾಕ್ರಿ ಎಂದು ಗೇಲಿ ಮಾಡಿದ್ದಾರೆ. ಶಾಕಿರ್ ಸನದಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ನಡುವೆ ಟಿಕೆಟ್ ಗೊಂದಲ ನಡೆದ ಹಿನ್ನೆಲೆ ಈ ಪೋಸ್ಟ್ ಮಾಡಲಾಗಿದ್ದು, ಬಿಜೆಪಿ ವಿರುದ್ಧ ಡಮ್ಮಿ ಕ್ಯಾಂಡಿಡೇಟ್ ಬೇಡ ಸ್ಟ್ರಾಂಗ್ ಅಭ್ಯರ್ಥಿ ಹಾಕಿ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಧಾರವಾಡ ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಾಗಲೇ ಶಾಕಿರ್ ಸನದಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ನಡುವೆ ಪೈಪೋಟಿ ನಡೆದಿದೆ. ಈ ಪೈಪೋಟಿಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.