ಕರ್ನಾಟಕ

karnataka

ETV Bharat / city

ಯತ್ನಾಳ್​ ರಾಜಕೀಯ ಭವಿಷ್ಯಕಾರ ಇದ್ದಂತೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ - ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಒಂದು ವರ್ಷದಿಂದ ನಡೆಯುತ್ತಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇದ್ದಾರೆ. ಅವರು ಏನು ಹೇಳ್ತಾರೋ ಅದೆಲ್ಲಾ ಸತ್ಯವಾಗಿದೆ‌ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Basava Jaya mrityunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ

By

Published : Jan 6, 2022, 12:40 PM IST

ಧಾರವಾಡ: ಯತ್ನಾಳ್​ ಒಂದು ರೀತಿ ರಾಜಕೀಯ ಭವಿಷ್ಯಕಾರ ಇದ್ದಂತೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ನಮ್ಮ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇದ್ದಾರೆ.

ಅವರು ಏನು ಹೇಳ್ತಾರೋ ಅದೆಲ್ಲಾ ಸತ್ಯವಾಗಿದೆ‌. ಸ್ವಲ್ಪ ತಡವಾಗಿ ಆಗಬಹುದು. ಆದರೂ ಹೇಳಿದ್ದೆಲ್ಲ ಸತ್ಯವಾಗಿದೆ ಎಂದು ಹೊಗಳಿದರು.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರಿನಲ್ಲಿ ನಡೆದ ದೊಡ್ಡ ರ‍್ಯಾಲಿಯಲ್ಲಿ ಅವರು ಒಂದು ಮಾತು ಹೇಳಿದ್ದರು. ಅದು ಸಹ ಎರಡು ತಿಂಗಳಲ್ಲಿ ನೆರವೇರಿದೆ. ಯತ್ನಾಳ್​ ಹೇಳುತ್ತಿರುವುದೆಲ್ಲವೂ ನಿಜವಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸುತ್ತಾರೆ.

ಬಜೆಟ್ ಒಳಗಾಗಿ ಸಿಎಂ ಮೀಸಲಾತಿ ಕೊಡುತ್ತಾರೆ ಎಂದು ಯತ್ನಾಳ್​ ಹೇಳಿದ್ದಾರೆ. ಈಗಾಗಲೇ ಸಮಾಜದ ನಾಲ್ವರು ಮುಖಂಡರ ಜೊತೆ ಸಿಎಂ ಮಾತನಾಡಿದ್ದಾರೆ. ಹಿಂದುಳಿದ ಸಮಾಜಕ್ಕೆ ಅನ್ಯಾಯವಾಗದಂತೆ ನಮಗೆ ನ್ಯಾಯ ಕೊಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details