ಹುಬ್ಬಳ್ಳಿ:ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಣೆ ಮಾಡಲಾಯಿತು.
ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳಾ ಸಿಬ್ಬಂದಿಯೇ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಪ್ಯಾಸೆಂಜರ್ ರೈಲು ಚಾಲನೆ ಮಾಡಿದರು. ಈ ವೇಳೆ ಟಿಕೆಟ್ ವಿತರಣೆಯಿಂದ ಹಿಡಿದು ಸ್ಟೇಶನ್ ಮಾಸ್ಟರ್, ಟಿಕೆಟ್ ಚೆಕ್ಕಿಂಗ್, ಸೆಕ್ಯುರಿಟಿ ಗಾರ್ಡ್‌ವರೆಗೆ ಎಲ್ಲ ಸೇವೆಯನ್ನೂ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದು ವಿಶೇಷವಾಗಿತ್ತು.