ಧಾರವಾಡ : ವಿವಾಹೇತರ ಸಂಬಂಧ ಹಿನ್ನೆಲೆ ಪ್ರಿಯಕರನ ಜೊತೆ ಸೇರಿಕೊಂಡು ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಧಾರವಾಡ: ವಿವಾಹೇತರ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನೇ ಮುಗಿಸಿದ್ಲು 'ಕಾವೇರಿ' - ಗಂಡನನ್ನು ಕೊಂದ ಮಹಿಳೆ
ಗೃಹಿಣಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಘಟನೆಗೆ ವಿವಾಹೇತರ ಸಂಬಂಧ ಕಾರಣ ಎಂದು ಹೇಳಲಾಗಿದೆ.
ಅನೈತಿಕ ಸಂಬಂಧ
ಮುಳಮುತ್ತಲ ಗ್ರಾಮದ ಬೀಮಪ್ಪ ಕರಿಸಿದ್ದಣ್ಣವರ (30) ಕೊಲೆಯಾದ ವ್ಯಕ್ತಿ. ಈತನನ್ನ ಪತ್ನಿ ಕಾವೇರಿ ಮತ್ತು ಆಕೆಯ ಪ್ರಿಯಕರ ಶಿವು ನಿಂಗೋಜಿ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗರಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಸಿದ್ದಪ್ಪನಿಗೆ ಎರಡು ಮಕ್ಕಳು ಇದ್ದಾರೆ. ಕಾವೇರಿ, ನಿಂಗೋಜಿ ಕಳೆದ ನಾಲ್ಕು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.