ಧಾರವಾಡ :ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೇಳಿಕೆಯಿಂದ ಮಾಜಿ ಸಚಿವ ಸಂತೋಷ ಲಾಡ್‌ಗೆ ಜಿಲ್ಲೆಯ ಕಲಘಟಗಿ ಕ್ಷೇತ್ರ ಕೈ ತಪ್ಪಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.
ಓ ಲಾಡ್!! ಕಲಘಟಗಿ ಕ್ಷೇತ್ರಕ್ಕೆ ಈಗಲೇ ಟವಲ್ ಹಾಕಿದ ಛಬ್ಬಿ.. ಮಾಜಿ ಸಚಿವರಿಗೆ ಅ'ಸಂತೋಷ'! - ನಾಗರಾಜ ಛಬ್ಬಿ
ನಗರದ ಹೊರವಲಯದ ಕೆಲಗೇರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ 'ನಮ್ಮ ಗ್ರಾಮ ನಮ್ಮ ಶಕ್ತಿ' ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಿಗೆ ಸನ್ಮಾನಿಸಿ ಮಾತನಾಡುವಾಗ, ಕಲಘಟಗಿ ಕ್ಷೇತ್ರ ಗೆಲ್ಲಲು ಸಾರಥಿಯಾಗಿ ನಿಲ್ಲುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯಲ್ಲಿ ಛಬ್ಬಿ ಕೋರಿದ್ದಾರೆ..
ನಗರದ ಹೊರವಲಯದ ಕೆಲಗೇರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ 'ನಮ್ಮ ಗ್ರಾಮ ನಮ್ಮ ಶಕ್ತಿ' ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಿಗೆ ಸನ್ಮಾನಿಸಿ ಮಾತನಾಡುವಾಗ, ಕಲಘಟಗಿ ಕ್ಷೇತ್ರ ಗೆಲ್ಲಲು ಸಾರಥಿಯಾಗಿ ನಿಲ್ಲುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯಲ್ಲಿ ಛಬ್ಬಿ ಕೋರಿದ್ದಾರೆ.
ಈಗ ಕಲಘಟಗಿ ಕ್ಷೇತ್ರ ಬಿಜೆಪಿ ಕೈಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ನಾವು ಆ ಕ್ಷೇತ್ರ ಗೆಲ್ಲಬೇಕಿದೆ. ಇದಕ್ಕಾಗಿ ಸತೀಶಣ್ಣನವರು ನನಗೆ ಸಾರಥಿಯಾಗಿ ನಿಲ್ಲಬೇಕು. ಈ ಕ್ಷೇತ್ರ ಗೆಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಛಬ್ಭಿ ಹೇಳಿದ್ದು, ಮುಂದಿನ ಚುನಾವಣೆಯಲ್ಲಿ ಕೈ ಟಿಕೆಟ್ ಲಾಡ್‌ಗೆ ತಪ್ಪಿ ಛಬ್ಬಿಯವರಿಗೆ ಸಿಗಲಿದೆಯಾ ಎಂಬ ಅನುಮಾನ ಮೂಡುವಂತೆ ಮಾಡಿದೆ.