ಧಾರವಾಡ: ಎರಡನೇ ಮದುವೆಗೆ ತಯಾರಾಗಿದ್ದ ಪತಿಯನ್ನು, ಆತನ ಪತ್ನಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಮೂಲದ ಡ್ಯಾನಿಷ್ ಮನಿಯಾರ ಎಂಬುವವರಿಗೆ 9 ವರ್ಷದ ಹಿಂದೆಯೇ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ.

ಈ ಮಧ್ಯೆ ಡ್ಯಾನಿಷ್ ಧಾರವಾಡ ಕೃಷಿ ವಿವಿ ಆವರಣದಲ್ಲಿನ ದರ್ಗಾದಲ್ಲಿ ಎರಡನೇ ಮದುವೆಯಾಗಲು ತಯಾರಾಗಿದ್ದ. ಈ ವಿಷಯ ತಿಳಿದ ಆತನ ಪತ್ನಿ, ದರ್ಗಾಗೆ ತೆರಳಿ ಗಲಾಟೆ ನಡೆಸಿದ್ದಾಳೆ. ಈ ವೇಳೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕೆಲಹೊತ್ತು ಜಟಾಪಟಿ ನಡೆಯಿತು.
ಕೂಡಲೇ ಸ್ಥಳಕ್ಕಾಗಮಿಸಿದ ಉಪನಗರ ಠಾಣೆ ಪೊಲೀಸರು, ಡ್ಯಾನಿಷ್ ಮತ್ತು ಆತನ ಪತ್ನಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಓದಿ:ಎರಡು ಬಸ್ - ಲಾರಿ ನಡುವೆ ಡಿಕ್ಕಿ: ಐವರ ದಾರುಣ ಸಾವು.. 25 ಮಂದಿಗೆ ಗಾಯ