ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ವರುಣಾರ್ಭಟ: ಮನೆಗಳಿಗೆ ನುಗ್ಗಿದ ನೀರು - heavy rain in hubli

ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆರಾಯನ ಆರ್ಭಟಕ್ಕೆ ಹುಬ್ಬಳ್ಳಿ ವಿಶ್ವೇಶ್ವರ ನಗರದ ಜನ ತತ್ತರಿಸಿದ್ದಾರೆ.

 Water Into The House by heavy rain
Water Into The House by heavy rain

By

Published : May 21, 2021, 10:51 PM IST

Updated : May 21, 2021, 11:01 PM IST

ಹುಬ್ಬಳ್ಳಿ: ಇಂದು ಸುರಿದ ಭಾರಿ ಮಳೆಯಿಂದಾಗಿ ನಗರದ ವಿಶ್ವೇಶ್ವರ ನಗರ ವಾರ್ಡ್ ನಂಬರ್ 28 ರಲ್ಲಿ ಬರುವ ಬಹುತೇಕ ಮನೆಗಳಲ್ಲಿ ನೀರು ನುಗ್ಗಿದೆ.

ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆರಾಯನ ಆರ್ಭಟಕ್ಕೆ ಹುಬ್ಬಳ್ಳಿ ವಿಶ್ವೇಶ್ವರ ನಗರದ ಜನ ತತ್ತರಿಸಿದ್ದಾರೆ. ಇಲ್ಲಿನ ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರು ಹೋರ ಹಾಕಲು‌ ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಕುಟುಂಬಸ್ಥರು ಕರೆ‌ ಮಾಡಿದರೆ, ಅವರು ಕರೆ ಸ್ವೀಕರಿಸುತ್ತಿಲ್ಲ ಮಳೆ ಬಂದರೆ ಸಾಕು ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ವರುಣಾರ್ಭಟ: ಮನೆಗಳಿಗೆ ನುಗ್ಗಿದ ನೀರು
Last Updated : May 21, 2021, 11:01 PM IST

ABOUT THE AUTHOR

...view details