ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವಾರ್ಡ್‌ ಬಾಯ್ ಬಂಧನ - ಲೈಂಗಿಕ ದೌರ್ಜನ್ಯ ಪ್ರಕರಣ

ಕೋವಿಡ್ ಸೋಂಕು ತಗುಲಿ ಪಾರ್ಶ್ವವಾಯು ಪೀಡಿತೆಯಾಗಿರುವ ನನ್ನ ತಾಯಿಯ ಮೇಲೆ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನನ್ವಯ ಆರೋಪಿ ಅಶೋಕ ಹಲಗಿ ಎಂಬಾತನನ್ನು ಬಂಧಿಸಲಾಗಿದೆ.

ward boy arrested in case of sexual assault in covid patient at Hubli private hospital
ವಾರ್ಡ್‌ ಬಾಯ್ ಬಂಧನ

By

Published : Jun 1, 2021, 9:56 AM IST

ಹುಬ್ಬಳ್ಳಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆಯೊಬ್ಬರ ಮೇಲೆ ನಡೆದಿದೆ ಎನ್ನಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾನಗರ ಠಾಣೆ ಪೊಲೀಸರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವಾರ್ಡ್ ಬಾಯ್​ನನ್ನು ಬಂಧಿಸಿದ್ದಾರೆ.

ಅಶೋಕ ಹಲಗಿ ಎಂಬಾತನೇ ಬಂಧಿತ ಆರೋಪಿ. ಘಟನೆ ನಂತರ ಅಶೋಕ ಅಣ್ಣಿಗೇರಿಯಲ್ಲಿ ತಲೆ ಮರೆಸಿಕೊಂಡಿದ್ದ. ಬಳಿಕ, ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದ ಆತನನ್ನು ಬಂಧಿಸಲಾಗಿದೆ.

ಕೋವಿಡ್ ಸೋಂಕು ತಗುಲಿದ್ದು, ಪಾರ್ಶ್ವವಾಯು ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಸಿಟಿ ಸ್ಕ್ಯಾನ್ ಮಾಡುವುದಕ್ಕಾಗಿ ಅವರನ್ನು ಕೊಠಡಿಗೆ ಕರೆದೊಯ್ದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಮಹಿಳೆಯ ಪುತ್ರ ಆರೋಪಿಸಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಬಳ್ಳಾರಿಯ ಸಿರಗುಪ್ಪ ತಾಲೂಕಿನ 52 ವರ್ಷದ ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪವನ್ನು ಕೊರೊನಾ ಸೋಂಕಿತೆಯ ಪುತ್ರ ಮಾಡಿದ್ದರು.

ಓದಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸುಳ್ಳು ಎಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ

ಈ ಕುರಿತು ಮೇ 23ರಂದು ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details