ಹುಬ್ಬಳ್ಳಿ: ನಿನ್ನೆ ಸಂಜೆಯಿಂದ ವರುಣನ ಆರ್ಭಟ ಜೋರಾಗಿದ್ದು, ಕೆಲವೆಡೆ ಅವಾಂತರಗಳನ್ನೇ ಸೃಷ್ಟಿಸಿದೆ. ಅಕಾಲಿಕ ಮಳೆಯಿಂದ ಮನೆಯ ಗೋಡೆಯೊಂದು ಕುಸಿದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಅನೀಲಕುಮಾರ ಪಾಟೀಲ ಎಂಬುವರ ಮನೆ ಬಳಿ ಸಂಭವಿಸಿದೆ.
ಮಳೆಗೆ ಕುಸಿದ ಮನೆ ಗೋಡೆ; ಎರಡು ಕಾರುಗಳು ಜಖಂ - ಮನೆ ಗೋಡೆ ಕುಸಿದು ಎರಡು ಕಾರುಗಳಿಗೆ ಹಾನಿ
ಹುಬ್ಬಳ್ಳಿಯಲ್ಲಿ ನಿನ್ನೆ ದಿಢೀರನೇ ಸುರಿದ ಮಳೆ ಅವಾಂತರಕ್ಕೆ ಕಾರಣವಾಗಿದ್ದು, ಕಾರವಾರ ರಸ್ತೆ ಬಳಿಯ ಮನೆಯ ಗೋಡೆ ಕುಸಿದ ಪರಿಣಾಮ ಎರಡು ಕಾರುಗಳಿಗೆ ಹಾನಿಯಾಗಿದೆ.
ಮಳೆಗೆ ಕುಸಿದ ಮನೆ ಗೋಡೆ; ಎರಡು ಕಾರುಗಳು ಜಖಂ
ಇದನ್ನೂ ಓದಿ: ಬೆಂಗಳೂರಲ್ಲಿ ತಡರಾತ್ರಿ ವರುಣನ ಆರ್ಭಟ; ಕೆಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತ!
ನೀತಿನ್ ಮೋಹಾಂಕ್ ಎಂಬುವವರಿಗೆ ಸೇರಿದ ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಈ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದು, ಏಕಾಏಕಿ ಗೋಡೆ ಕುಸಿದಿದ್ದು ಸಂಭವಿಸಬಹುದಾದ ಭಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.