ಕರ್ನಾಟಕ

karnataka

ETV Bharat / city

ಜಾಮೀನಿಗಾಗಿ ಹೈಕೋರ್ಟ್​ ಮೊರೆ ಹೋದ ಮಾಜಿ ಸಚಿವ: ವಿನಯ್​ ಕುಲಕರ್ಣಿ ಸೋದರ ಮಾವನನ್ನು ಕಸ್ಟಡಿಗೆ ಪಡೆದ ಸಿಬಿಐ

ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ ಅವರಿಗೆ ಜಾಮೀನು‌ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಪರ ವಕೀಲರು ಹೈಕೋರ್ಟ್​​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಯೋಗೇಶಗೌಡ ಹತ್ಯೆ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ‌ ‌ಕಸ್ಟಡಿಗೆ ನೀಡಲಾಗಿದೆ.

vinay-kulkarni-applied-application-for-bail-in-high-court
ಮಾಜಿ ಸಚಿವ ವಿನಯ್​ ಕುಲಕರ್ಣಿ

By

Published : Dec 15, 2020, 8:31 PM IST

ಧಾರವಾಡ: ಜಿಲ್ಲಾ ಪಂಚಾಯತ್​ ‌ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನಿಗಾಗಿ ಹೈಕೋರ್ಟ್​ಗೆ ಮೊರೆ ಹೋಗಿದ್ದಾರೆ.

ನಿನ್ನೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ ಅವರಿಗೆ ಜಾಮೀನು‌ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಪರ ವಕೀಲರು ಹೈಕೋರ್ಟ್​​​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಓದಿ-ಯೋಗೇಶ್ ಗೌಡ ಹತ್ಯೆ ಪ್ರಕರಣ: ಎರಡು ದಿನಗಳ ಸಿಬಿಐ ಕಸ್ಟಡಿಗೆ ಚಂದ್ರಶೇಖರ ಇಂಡಿ

ವಿನಯ್ ಕುಲಕರ್ಣಿ ಸೋದರ ಮಾವನನ್ನು ವಶಕ್ಕೆ ಪಡೆದ ಸಿಬಿಐ

ಯೋಗೇಶಗೌಡ ಹತ್ಯೆ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ‌ ‌ಕಸ್ಟಡಿಗೆ ಪಡೆದುಕೊಂಡಿದ್ದು, ಧಾರವಾಡ ಕೇಂದ್ರ ಕಾರಾಗೃಹದಿಂದ ಧಾರವಾಡ ಉಪನಗರ ಠಾಣೆಗೆ ಕರೆ ತಂದಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯ ಎರಡು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿತ್ತು. ಈ ಹಿನ್ನೆಲೆ ಎರಡು ದಿನಗಳ ಕಾಲ ಚಂದ್ರಶೇಖರ ಇಂಡಿಗೆ ಸಿಬಿಐ ಡ್ರಿಲ್‌ ನಡೆಸಲಿದೆ.

ABOUT THE AUTHOR

...view details