ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಮನನೊಂದು ಮಠ ತೊರೆದ ಸ್ವಾಮೀಜಿ.. ಶ್ರೀಗಳ ಮನವೊಲಿಸಲು ಬಂದ ಭಕ್ತರ ದಂಡು - Swamiji who left mutt villagers waiting for arrival of Shivakumar swamiji in dharwad district

ಮನೆಯಲ್ಲಿ ಜಗಳ ಮಾಡಿದರೇ ಮಕ್ಕಳು ಮನೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಊರಿಗೆ ಮಾರ್ಗದರ್ಶಕರಾಗಿದ್ದ ಶ್ರೀಗಳು ಮನಸ್ಸಿಗೆ ನೋವಾಗಿರುವ ಹಿನ್ನೆಲೆಯಲ್ಲಿ ಊರನ್ನೇ ಬಿಟ್ಟು ಬಂದಿದ್ದಾರೆ. ಅಣ್ಣಿಗೇರಿ ದಾಸೋಹ ಮಠ ತೊರೆದಿದ್ದ ಶಿವಕುಮಾರ್ ಸ್ವಾಮೀಜಿ ಅವರನ್ನು ಮತ್ತೆ ಮಠಕ್ಕೆ ಕರೆತರುವ ಪ್ರಯತ್ನವನ್ನು ಭಕ್ತರು ನಡೆಸಿದ್ದಾರೆ.

Swamiji who left mutt; villagers waiting for arrival of swamiji in dharwad district
ಮನನೊಂದು 6 ತಿಂಗಳ ಹಿಂದೆ ಮಠ ತೊರೆದಿದ್ದ ಸ್ವಾಮೀಜಿ; ಶ್ರೀಗಳ ಮನವೊಲಿಸಿ ಮಠಕ್ಕೆ ಕರೆದೊಯ್ಯಲು ಗ್ರಾಮಸ್ಥರು ಪಟ್ಟು

By

Published : Jan 6, 2022, 6:33 PM IST

ಹುಬ್ಬಳ್ಳಿ: ಮಠದ ಆಡಳಿತ ಮಂಡಳಿಯ ಸದಸ್ಯರೊಬ್ಬರ ನಿಂದನೆಯಿಂದ ಮನನೊಂದು ಅಣ್ಣಿಗೇರಿ ದಾಸೋಹ ಮಠ ತೊರೆದಿದ್ದ ಶಿವಕುಮಾರ್ ಸ್ವಾಮೀಜಿ ಅವರನ್ನು ಮತ್ತೆ ಮಠಕ್ಕೆ ಕರೆತರುವ ಸಲುವಾಗಿ ಇಂದು ಭಕ್ತರ ಮಹಾದಂಡೇ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಂದಿದೆ.

ಸುಮಾರು ಆರು ತಿಂಗಳ ಹಿಂದೆಯೇ ಸ್ವಾಮೀಜಿ ಮಠ ತೊರೆದು ಹುಬ್ಬಳ್ಳಿಗೆ ಬಂದಿದ್ದರು. ಬೆಳಗ್ಗೆಯಿಂದಲೇ ಸ್ವಾಮೀಜಿಯವರ ಮನವೊಲಿಸಲು ಭಕ್ತರು ಮುಂದಾಗಿದ್ದು, ಸ್ವಾಮೀಜಿಯವರನ್ನು ಕರೆದುಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಮಠವನ್ನು ಮಾತ್ರವಲ್ಲದೆ ಊರಿನ ಉದ್ಧಾರಕ್ಕಾಗಿ ಶ್ರಮಿಸಿದ ಸ್ವಾಮೀಜಿ ಕಾರ್ಯಕ್ಕೆ ಊರಿಗೆ ಊರೇ ಮನವೊಲಿಸಲು ಬಂದಿದೆ. ಮಠದಲ್ಲಿ ಜ್ಞಾನ ದಾಸೋಹದ ಮೂಲಕ ಅಣ್ಣಿಗೇರಿ ಪಟ್ಟಣವನ್ನು ಶ್ರೀಮಂತಗೊಳಿಸಿದ ಸ್ವಾಮೀಜಿಯವರ ಆಗಮನಕ್ಕೆ ಊರಿಗೆ ಊರೇ ಎದುರು ನೋಡುತ್ತಿದೆ.

For All Latest Updates

TAGGED:

ABOUT THE AUTHOR

...view details