ಹುಬ್ಬಳ್ಳಿ:ಲಾಕ್ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಜಮೀನು ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ! - ಕುಂದಗೋಳ ತಾಲೂಕು ಬೆನಕನಹಳ್ಳಿ ಗ್ರಾಮ
ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ, ವೆಂಕಟೇಶ ಗುರಪ್ಪ ಲಮಾಣಿ, ಇಸ್ಮಾಯಿಲ್ ಹತ್ತಿಮತ್ತೂರ ಎಂಬುವರ ಜಮೀನು ನೋಂದಣಿಗೆ ಸಂಬಂಧಿಸಿದಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದ.
![ಜಮೀನು ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ! Village accountent arrested for demanding money for land registration](https://etvbharatimages.akamaized.net/etvbharat/prod-images/768-512-7463156-1061-7463156-1591192853519.jpg)
ಜಮೀನು ನೋಂದಣಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ!
ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ, ವೆಂಕಟೇಶ ಗುರಪ್ಪ ಲಮಾಣಿ, ಇಸ್ಮಾಯಿಲ್ ಹತ್ತಿಮತ್ತೂರ ಎಂಬುವರ ಜಮೀನು ನೋಂದಣಿಗೆ ಸಂಬಂಧಿಸಿದಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಇಸ್ಮಾಯಿಲ್, ಡಿಎಸ್ಪಿ ವಿಜಯಕುಮಾರ್ ಬಿಸನಳ್ಳಿಯವರಿಗೆ ದೂರು ನೀಡಿದ್ದರು. ಬಳಿಕ ಡಿಎಸ್ಪಿ ತಂಡವೊಂದನ್ನ ರಚಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ಆರೋಪಿಯನ್ನ ಬಂಧಿಸಿದ್ದಾರೆ.
ಈ ಕುರಿತು ಧಾರವಾಡ ಎಸಿಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.