ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾಗಿದ್ದರೂ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ವಾಹನ ಸವಾರರರೇ ಎಚ್ಚರ: ಬೇಕಾಬಿಟ್ಟಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಆಗಲಿದೆ ಸೀಜ್!
ಕೇವಲ ತುರ್ತುಪರಿಸ್ಥಿತಿ ಮತ್ತು ವೈದ್ಯಕೀಯ ಸಿಬ್ಬಂದಿ ಹೊರತು ಸುಮ್ಮನೆ ಪಾಸ್ ಪಡೆದು ಓಡಾಡಿದ್ರೆ ದಂಡದ ಜೊತೆಗೆ ವಾಹನ ಸೀಜ್ ಮಾಡಲಾಗುತ್ತಿದೆ.
ಇಂದಿನಿಂದ ಸುಖಾಸುಮ್ಮನೆ ರಸ್ತೆಗಿಳಿದರೆ ಫೈನ್ ಜೊತೆಗೆ 8 ದಿನಗಳ ಕಾಲ ವಾಹನಗಳು ಲಾಕ್ಡೌನ್ ಆಗಲಿವೆ. ಲಾಕ್ಡೌನ್ ಜಾರಿಯಿದ್ದರೂ ಜನರ ಓಡಾಟ ನಿರಂತರವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಪಾಸ್ ನೀಡಲು ಮುಂದಾಗಿದೆ. ಕೇವಲ ತುರ್ತುಪರಿಸ್ಥಿತಿ ಮತ್ತು ವೈದ್ಯಕೀಯ ಸಿಬ್ಬಂದಿ ಹೊರತು ಸುಮ್ಮನೆ ಪಾಸ್ ಪಡೆದು ಓಡಾಡಿದರೆ ದಂಡದ ಜೊತೆಗೆ ವಾಹನ ಸೀಜ್ ಮಾಡಲಾಗುತ್ತಿದೆ.
ದಂಡ ವಿಧಿಸಿದ್ರೆ ದಂಡ ಕಟ್ಟಿ ಮತ್ತೆ ವಾಹನದಲ್ಲಿ ಓಡಾಡುವ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ವಾಹನಗಳನ್ನು ಸೀಜ್ ಮಾಡಿದ್ರೆ ಓಡಾಟಕ್ಕೆ ಬ್ರೇಕ್ ಹಾಕಬಹುದು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಪೊಲೀಸ್ ಇಲಾಖೆ ಸನ್ನದ್ದವಾಗಿದೆ.