ಕರ್ನಾಟಕ

karnataka

ETV Bharat / city

ಸುನೀಲ್​ ಪುರಾಣಿಕ ವಿರುದ್ಧದ ಸಾ.ರಾ. ಗೋವಿಂದ ಹೇಳಿಕೆಗೆ ಉಕ ಚಲನಚಿತ್ರ ಮಂಡಳಿ ಖಂಡನೆ - ನಿರ್ಮಾಪಕ ಸಾರಾ ಗೋವಿಂದು

ಸುನೀಲ್​ ಪುರಾಣಿಕ ಬಗ್ಗೆ ಸಾ.ರಾ. ಗೋವಿಂದು ಸೆನ್ಸಾರ್ ಮಂಡಳಿ ವಿಚಾರಕ್ಕೆ ಅವಹೇಳನ ಮಾಡಿದ್ದಾರೆಂಬ ಆರೋಪ‌ ಕೇಳಿ ಬಂದಿದೆ. ಸಾ.ರಾ. ಗೋವಿಂದು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಪುರಾಣಿಕ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರು ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಉಕ ಫಿಲ್ಮ್ ಚೆಂಬರ್ ಅಧ್ಯಕ್ಷ ಶಂಕರ ಸುಗತೆ ಆಗ್ರಹಿಸಿದರು.

uttara-karnataka-film-board-condemns-sara-govinda-statement
ಉಕ ಚಲನಚಿತ್ರ ಮಂಡಳಿ

By

Published : Jun 21, 2021, 3:32 PM IST

ಧಾರವಾಡ: ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್​ ಪುರಾಣಿಕ ವಿರುದ್ಧ ನಿರ್ಮಾಪಕ ಸಾ.ರಾ. ಗೋವಿಂದು ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಹೇಳಿಕೆ ಮರಳಿ ಪಡೆಯುವಂತೆ ಆಗ್ರಹಿಸಿದರು.

ಸಾ.ರಾ. ಗೋವಿಂದ ಹೇಳಿಕೆಗೆ ಉಕ ಚಲನಚಿತ್ರ ಮಂಡಳಿ ಖಂಡನೆ

ಪುರಾಣಿಕ ಬಗ್ಗೆ ಸಾ.ರಾ. ಗೋವಿಂದು ಸೆನ್ಸಾರ್ ಮಂಡಳಿ ವಿಚಾರಕ್ಕೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಸಾ.ರಾ. ಗೋವಿಂದು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಪುರಾಣಿಕ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರು ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಉಕ ಫಿಲ್ಮ್ ಚೆಂಬರ್ ಅಧ್ಯಕ್ಷ ಶಂಕರ ಸುಗತೆ ಆಗ್ರಹಿಸಿದರು.

ಪುರಾಣಿಕ ಉತ್ತರ ಕರ್ನಾಟಕದವರು ಎನ್ನುವ ಕಾರಣಕ್ಕೆ ಕೆಲವರು ಆರೋಪ ಮಾಡುತ್ತಿದ್ದಾರೆ. ಪುರಾಣಿಕ ಅವರೂ ಅನುಭವಸ್ಥರಿದ್ದಾರೆ. ಅಂಥಹವರ ಬಗ್ಗೆ ಆರೋಪ ಮಾಡಿ ತಮ್ಮ ಗೌರವ ಕಳೆದು ಕೊಳ್ಳಬಾರದು ಎಂದು ಹೇಳಿದರು.

ABOUT THE AUTHOR

...view details