ಧಾರವಾಡ :ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸುವ ಸಲುವಾಗಿರಾಜ್ಯದಲ್ಲಿ ನಡೆಯಲಿರುವ ಮೂರು ರೈತ ಸಮಾವೇಶದ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿತು.
ರಾಜ್ಯದಲ್ಲೂ ರಾಕೇಶ್ ಟಿಕಾಯತ್ ಹವಾ.. ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರಣಕಹಳೆ..
ಮಾರ್ಚ್ 20 ಶಿವಮೊಗ್ಗ, ಮಾರ್ಚ್ 21ರಂದು ಹಾವೇರಿ ಹಾಗೂ ಮಾ. 31ರಂದು ಬೆಳಗಾವಿಯಲ್ಲಿ ಸಮಾವೇಶಗಳು ನಡೆಯಲಿವೆ. ಈ ಮೂರು ಸಮಾವೇಶಗಳಲ್ಲಿ ಟಿಕಾಯತ್ ಸೇರಿ ಮೂವರೂ ನಾಯಕರು ಪಾಲ್ಗೊಳ್ಳುತ್ತಾರೆ..
ನಗರದ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ವಿಭಾಗ ಮಟ್ಟದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಜಿಲ್ಲೆಗಳ ಪೂರ್ವಬಾವಿ ಸಭೆ ಬಳಿಕ ರೈತ ಮುಖಂಡ ಕೆ. ಟಿ. ಗಂಗಾಧರ ಮಾತನಾಡಿ, ರಾಜ್ಯದಲ್ಲಿ ರಾಕೇಶ್ ಟಿಕಾಯತ್, ಯಜುವೀರ ಸಿಂಗ್, ಡಾ. ದರ್ಶನ ಪಾಲ್ ಸಂಚಾರ ಮಾಡಲಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ರೈತ ಸಮಾವೇಶಗಳಲ್ಲಿಯೂ ಮೂವರು ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 20 ಶಿವಮೊಗ್ಗ, ಮಾರ್ಚ್ 21ರಂದು ಹಾವೇರಿ ಹಾಗೂ ಮಾ. 31ರಂದು ಬೆಳಗಾವಿಯಲ್ಲಿ ಸಮಾವೇಶಗಳು ನಡೆಯಲಿವೆ. ಈ ಮೂರು ಸಮಾವೇಶಗಳಲ್ಲಿ ಟಿಕಾಯತ್ ಸೇರಿ ಮೂವರೂ ನಾಯಕರು ಪಾಲ್ಗೊಳ್ಳುತ್ತಾರೆ. ಕರ್ನಾಟಕದ ಮೂಲಕವೇ ದಕ್ಷಿಣ ಭಾರತದಲ್ಲಿ ರೈತ ಹೋರಾಟ ಆರಂಭವಾಗಲಿದೆ ಎಂದರು.