ಹುಬ್ಬಳ್ಳಿ :ಮುಖ್ಯಮಂತ್ರಿ ಬದಲಾವಣೆ ಇಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿರುವುದು.. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಕೆ.ಎಸ್ ಈಶ್ವರಪ್ಪ ಅವರು ಸಿಎಂ ಶೀಘ್ರವೇ ಬದಲಾವಣೆ ಆಗ್ತಾರೆ ಅಂತಾ ಹೇಳಿಲ್ಲ. ಆದ್ರೂ ಈ ರೀತಿ ಹೇಳಿಕೆ ನೀಡುವುದು ತಪ್ಪು. ಸಿಎಂ ಬದಲಾಣೆಯಾಗುವುದಿಲ್ಲ. ಬೊಮ್ಮಾಯಿಯವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯಯವರನ್ನ ಹೆಚ್ ಡಿ ದೇವೆಗೌಡ ಅವರು ಭೇಟಿಯಾಗಿದ್ದಾರೆ. ಅವರು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜಕೀಯವಾಗಿ ಮಾತನಾಡಿದ್ದಾರೆ ಅಂತಾ ಹೇಳಿಲ್ಲ.
ಹಾಸನದ ಐಐಟಿ ಮತ್ತು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದೊಂದು ಬೇಸ್‌ಲೆಸ್ ಆರೋಪ. 40 ಪರ್ಸೆಂಟೇಜ್ ಲಂಚ ಪಡೆದ ಸಾಕ್ಷಿ ಅವರ ಹತ್ತಿರ ಏನಾದ್ರು ಇದ್ರೆ ನೀಡಲಿ. ಅದನ್ನ ತನಿಖೆ ಮಾಡೋಣ. ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ ಎಂದರು.
ಪರಿಷತ್ ಚುನಾವಣೆಗೆ ಮೋದಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಪ್ರದೀಪ್ ಶೆಟ್ಟರ್ 6 ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.
ಮುಂದಿನ ಅವಧಿಗೆ ಅವರನ್ನೇ ಆಯ್ಕೆ ಮಾಡಿದ್ರೆ ಅಭಿವೃದ್ಧಿ ಮುಂದುವರಿಸಿಕೊಂಡಿ ಹೋಗುತ್ತಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ 16-17 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಈಶ್ವರಪ್ಪನವರ ಸಿಎಂ ಹೇಳಿಕೆಗೆ ಸಚಿವ ನಿರಾಣಿ ಹೇಳಿದ್ದು ಹೀಗೆ..